ಬಿಸಿ ರೋಡ್: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದಲ್ಲಿ ತನ್ನ ಸಹೋದರನನ್ನು ಅಣ್ಣನು ಅಡಿಕೆ ಮರದ ಸಲಾಕೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ ಘಟನೆ ವರದಿಯಾಗಿದೆ. ಕೊಲೆಯಾದ ಯುವಕನನ್ನು ಸುಂದರ 30 ಎಂದು ಗುರುತಿಸಲಾಗಿದೆ. ಬೊಂಡಲ ಶಾಂತಿಗುಡ್ಡೆಯಲ್ಲಿ ಸುಂದರ ಮತ್ತು ರವಿ ತಾಯಿಯ ವರ್ಷಂ ಪ್ರತಿ ನಡೆದಿತ್ತು.ಈ ಸಂದರ್ಭದಲ್ಲಿ ಸುಂದರ ಹಾಗೂ ರವಿಗೆ ಮಾತಿಗೆ ಮಾತು ಬೆಳೆದು ಜಗಳವಾಯಿತು.ರವಿ ಪಕ್ಕದಲ್ಲಿದ್ದ ಅಡಿಕೆ ಮರದ ಸಲಾಕೆಯಿಂದ ರವಿಯ ತಲೆಗೆ ಭೀಕರವಾಗಿ ಹೊಡೆದಿದ್ದಾನೆ. ಇದರಿಂದ ಸಹೋದರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಬಳಿಕ ರವಿ ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ.ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.