ಕರಾವಳಿ

ಧರ್ಮಸ್ಥಳದ ಕಾವಲುಗಾರ ಕೊಕ್ಕಡದಲ್ಲಿ ಆತ್ಮಹತ್ಯೆ

475

ನ್ಯೂಸ್ ನಾಟೌಟ್:  ಧರ್ಮಸ್ಥಳದಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಕೊಕ್ಕಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ  ವಸಂತ ಮಡಿವಾಳ(46)ಆತ್ಮಹತ್ಮೆ ಮಾಡಿಕೊಂಡವರು. ಕೊಕ್ಕಡದಲ್ಲಿರುವ  ಪತ್ನಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಡಬ ತಾಲೂಕಿನ  ಇವರು  ಆ.25ರಂದು ಮಧ್ಯಾಹ್ನ ಕೊಕ್ಕಡ ಗ್ರಾಮದ ಕೆಂಪಕೋಡಿಯಲ್ಲಿರುವ ಪತ್ನಿಯ ಮನೆಗೆ ಬಂದಿದ್ದಾರೆ. ಬರುವಾಗಲೇ ಮದ್ಯದ ಜೊತೆ ವಿಷಪದಾರ್ಥ ಸೇವಿಸಿದ್ದರು ಎನ್ನಲಾಗಿದೆ. ಅಸ್ವಸ್ಥಗೊಂಡಿದ್ದ ಇವರನ್ನು  ತಕ್ಷಣ ನೆಲ್ಯಾಡಿಯ ಖಾಸಗಿ  ಆಸ್ಪತ್ರೆಗೆ ಕರೆತಂದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ  ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ತಡರಾತ್ರಿ ವೇಳೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ವಿಪರೀತ ಕುಡಿತದ ಚಟಹೊಂದಿದ್ದ ವಸಂತ ಮಡಿವಾಳ ಅವರು ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ. ಧರ್ಮಸ್ಥಳ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಾಯಿ, ಪತ್ನಿ ಹರಿಣಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.  

See also  ಪುತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರಿಂದ ಪ್ರಾರ್ಥನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget