ಕ್ರೈಂ

ತೆಂಗಿನಕಾಯಿ ಕೊಯ್ಯಲು ಹೋದವನು ಆಯತಪ್ಪಿ ಬಿದ್ದು ಸಾವು

939

ಕಾರ್ಕಳ: ತೆಂಗಿನಕಾಯಿ ಕೊಯ್ಯಲೆಂದು ಮರವೇರಿದ ವ್ಯಕ್ತಿ ಆಯತಪ್ಪಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ನಿತ್ಯಾನಂದ ಪುಭು(41) ಘಟನೆಯಲ್ಲಿ ಮೃತ ದುರ್ದೈವಿಯಾಗಿದ್ದಾರೆ.

ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಮನೆಯ ತೆಂಗಿನ ಮರಕ್ಕೇರಿದ್ದರು. ಈ ವೇಳೆ ಆಕಸ್ಮಿಕವಾಗಿ ಮರದಿಂದ ನೆಲಕ್ಕೆ ಬಿದ್ದ ಅವರ ತಲೆಗೆ, ಕೈ, ಕಾಲಿಗೆ ಗಂಭೀರ ಗಾಯ ಉಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

See also  ಮನೆಯಲ್ಲಿ ಸಾಕಿದ್ದ ಮೊಲ ಕಚ್ಚಿ ಮಹಿಳೆ ಸಾವು..? ಅನುಮಾನಗೊಂಡ ಪೊಲೀಸರಿಂದ ತನಿಖೆ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget