ಜೀವನಶೈಲಿ

ಪ್ರಿಯಕರನೊಂದಿಗೆ ಸರಸಕ್ಕಿಳಿದ ಮಹಿಳೆ..! ತನಗೆ ಅಡ್ಡಿಯಾಗ್ತಾಳೆಂದು ಹೆತ್ತ ಮಗಳನ್ನೆ ಕತ್ತು ಕೊಯ್ದು ಕೊಂದ ಪಾಪಿ ತಾಯಿ..!

ನ್ಯೂಸ್‌ ನಾಟೌಟ್‌: ಹೆತ್ತ ತಾಯಿ ದೇವರಿಗೆ ಸಮಾನ ಎಂಬ ಮಾತಿದೆ. ಮಕ್ಕಳಿಗೋಸ್ಕರ ಅದೆಷ್ಟೋ ತಾಯಂದಿರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರ್ತಾರೆ. ನಾಲ್ಕು ಮನೆಗಳಲ್ಲಿ ಮುಸುರೆ ತಿಕ್ಕಿ ಅಥವಾ ಕೂಲಿ ನಾಲಿ ಮಾಡಿಯೋ ತಮ್ಮ ಮಕ್ಕಳನ್ನ ಬೆಳೆಸ್ತಿರೋ ತಾಯಂದಿರ ಮಧ್ಯೆ ಇಲ್ಲೊಬ್ಬಳು ಪಾಪಿ ತಾಯಿ,ತಾನು ಹೆತ್ತ ಮಗಳನ್ನೇ ಪ್ರಿಯಕರನ ಜೊತೆ ಸೇರಿ ಕತ್ತು ಕೊಯ್ದು ಕೊಂದಿರುವ ಘಟನೆ ಬಗ್ಗೆ ವರದಿಯಾಗಿದೆ. ಏನಿದು ಮನಕಲಕುವ ಘಟನೆ? ಇಲ್ಲಿದೆ ವರದಿ..

ಆಕೆಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತವರು ಮನೆ ಸೇರ್ಕೊಂಡಿದ್ಲು. ಪ್ರೀತಿಸುವುದೇ ಈಕೆಗೆ ಚಾಳಿಯಾಗಿತ್ತು.ಹೀಗೆ ಮತ್ತೊಬ್ಬನ ಜೊತೆ ಪ್ರೇಮಾಂಕುರವಾಗಿತ್ತು. ಕದ್ದು ಮುಚ್ಚಿ ಮನೆಗೆ ಬಂದು ಹೋಗುತ್ತಿದ್ದ.ಕದ್ದು ಮುಚ್ಚಿ ಪ್ರೀತ್ಸೋದು ಕಷ್ಟ ಆದಾಗ ಇಬ್ಬರು ಮದುವೆ ಮಾಡ್ಕೊಳ್ಳೋದಕ್ಕೆ ನಿರ್ಧಾರ ಮಾಡ್ತಾರೆ…

ಆಕೆಗೆ ಮಕ್ಕಳಿದ್ದ ಕಾರಣ ಹೆತ್ತ ಮಗಳು ತಲೆ ನೋವಾಗಿ ಪರಿಣಮಿಸಿದಳು. ಇದಕ್ಕೊಂದು ಪರಿಹಾರ ಕಂಡು ಹಿಡಿಯೋದಾಗಿ ನಿರ್ಧರಿಸಿದ ಜ್ಯೋತಿ ಒಂದು ಪ್ಲ್ಯಾನ್ ಹುಡುಕಿದ್ಲು. ತನ್ನ ಪ್ರಿಯಕರನ ರಾಹುಲ್ ತೆರದಾಳ್ ಜೊತೆ ಸೇರಿ, ಎತ್ತಿ ಆಡಿಸಿದ ಕೈಗಳಿಂದಲೇ ಕತ್ತು ಕೊಯ್ದು ಕೊಂದು ಹೈ ಡ್ರಾಮ ಮಾಡ್ತಾಳೆ.

ಈ ಹಿಂದೆ ಕಲ್ಲಯ್ಯ ಎಂಬಾತನ್ನು ಪ್ರೀತಿಸಿ ಮದುವೆಯಾಗಿ ಕೊನೆಗೆ ಅವನಿಗೂ ಡಿವೋರ್ಸ್ ಕೊಟ್ಟಿದ್ದಳು. ನಂತರ ಜ್ಯೋತಿಗೆ ರಾಹುಲ್ ಅನ್ನೋ 22 ವರ್ಷದ ಯುವಕನೊಂದಿಗೆ ದೋಸ್ತಿ ಶುರುವಾಗುತ್ತೆ. ದೋಸ್ತಿ ಪ್ರೀತಿಗೆ ತಿರುಗೋದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಆದ್ರೆ ಪ್ರೀತಿ ಮದುವೆಯ ಹಂತಕ್ಕೆ ಹೋಗೋದಕ್ಕೆ ಜ್ಯೋತಿಯ 5 ವರ್ಷದ ಅವಳಿ ಮಕ್ಕಳು ಅಡ್ಡಿಯಾಗಿದ್ರು. ಈ ಕಾರಣಕ್ಕೆ ವಿಕಲಾಂಗಚೇತನೆಯಾಗಿದ್ದ ತನ್ನ ಮಗಳ ಕಥೆಯನ್ನೇ ಮುಗಿಸಿದ್ದಳು. ಕೊನೆಗೆ ಪ್ರಿಯಕರನ ಜೊತೆ ಸೇರಿ ತನ್ನ ಮಗಳನ್ನೇ ಕೊಲೆಗೈದು ತಾಯಿ ಅನ್ನೋ ಪದಕ್ಕೆ ಅಪವಾದ ತಂದಿದ್ದಾಳೆ.ಈ ಘಟನೆ ನೋಡಿದಾಗ ಜಗತ್ತಿನಲ್ಲಿ ಇಂತಹ ತಾಯಂದಿರು ಇರ್ತಾರಾ ಅನ್ನೋ ಭಾವನೆ ಮೂಡದಿರದು.

Related posts

‘ಮಹಿಳೆಯರನ್ನು ಹೆಚ್ಚು ಕಾಡುವ ಈ ಕ್ಯಾನ್ಸರ್ ತುಂಬಾ ಅಪಾಯಕಾರಿ’, ಏನಿದು ಹ್ಯೂಮನ್ ಪ್ಯಾಪಿಲೋಮಾ ವೈರಸ್ ಲಸಿಕೆ..?

ಉಳ್ಳಾಲ: ಊಟ ಮಾಡಿ ಮಲಗಿದ್ದ ವಿವಾಹಿತ ಯುವಕ ಮತ್ತೆ ಏಳಲೇ ಇಲ್ಲ..! ಹೃದಯಾಘಾತದಿಂದ ಸಾವು ಸಂಭವಿಸಿರುವ ಶಂಕೆ

ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಈ ಮನೆ ಮದ್ದು ಬೆಸ್ಟ್