ಕರಾವಳಿ

ಮಂಗಳೂರಿನ ಈರುಳ್ಳಿ ವ್ಯಾಪಾರಿಗೆ ಬರೋಬ್ಬರಿ 75 ಲಕ್ಷ ರೂ.ವಂಚಿಸಿದ ಸೋಲಾಪುರದ ವ್ಯಕ್ತಿ,ಅಷ್ಟಕ್ಕೂ ವಂಚನೆ ಮಾಡಿದ ವ್ಯಕ್ತಿ ಯಾರು?

256

ನ್ಯೂಸ್ ನಾಟೌಟ್: ಮಂಗಳೂರಿನ ವ್ಯಕ್ತಿಯೊಬ್ಬನಿಗೆ 75 ಲಕ್ಷ ರು.ವಂಚಿಸಿರುವ ಘಟನೆ ಮ೦ಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.ಮಹಾರಾಷ್ಟ್ರದ ಸೋಲಾಪುರದ ನೀರುಳ್ಳಿ ವ್ಯಾಪಾರಿಯೋವ೯ ನಂಬಿಸಿ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಅಬ್ದುಲ್ ರಹಿಮಾನ್ ಬಾವಾ ಎ೦ಬವರು ವಂಚನೆಗೊಳಗಾದ ವ್ಯಕ್ತಿಯೆಂದು ತಿಳಿದು ಬಂದಿದೆ. ವ್ಯವಹಾರದ ಸಮಯ ಮಹಾರಾಷ್ಟ್ರದ ಸೋಲಾಪುರದ ಸಿದ್ದೇಶ್ವರ ಟ್ರೆಡರ್ಸ್ ನ ಕುಂಡಲಿಕ್ ಜುಂಬಾರ್ ಖಂಡಾಗಲೆ ವಂಚಿಸಿದ ಆರೋಪಿಯೆಂದು ತಿಳಿದು ಬಂದಿದೆ.

ಮಂಗಳೂರು ವ್ಯಕ್ತಿ ಅಬ್ದುಲ್ ರಹಿಮಾನ್ ಬಾವಾ ಮಂಗಳೂರು ಮತ್ತು ಚೆನ್ನೈನಲ್ಲಿ ವ್ಯವಹಾರ ಹೊಂದಿರುವ ನೀರುಳ್ಳಿ ವ್ಯಾಪಾರಿಯಾಗಿದ್ದು,ಜನವರಿ 2021 ರಲ್ಲಿ ಮಹಾರಾಷ್ಟ್ರದ ಸೋಲಾಪುರದ ನೀರುಳ್ಳಿ ವ್ಯಾಪಾರಿಯೋವ೯ನ ಜತೆ ಪರಿಚಯವಾಗಿ ನಂತರ ಇತರ ಕೃಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ ಆತ್ಮೀಯರಾಗಿದ್ದರು ಎಂದು ತಿಳಿದು ಬಂದಿದೆ.

ಆದರೆ ಆರೋಪಿ ಕುಂಡಲಿಕ್ ಜುಂಬಾರ್ ಖಂಡಾಗಲೆ ವಂಚಿಸುವ ಉದ್ದೇಶದಿಂದ ವ್ಯವಹಾರದಲ್ಲಿ ಮಂಗಳೂರಿನ ವ್ಯಕ್ತಿಯೊಂದಿಗೆ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಮಂಗಳೂರಿಗೆ ಬಂದಿದ್ದ.ಮಹಾರಾಷ್ಟ್ರದ ಸೋಲಾಪುರದಲ್ಲಿರುವ ಆತನ ಮಾಲೀಕತ್ವದ ಸಿದ್ದೇಶ್ವರ ಟ್ರೇಡರ್ಸ್ ಗೆ ಅಬ್ದುಲ್ ರಹಿಮಾನ್ ಅವರ ಮಂಗಳೂರಿನ ಬ್ಯಾಂಕ್ ಖಾತೆಯಿ೦ದ ವಿವಿಧ ದಿನಗಳಲ್ಲಿ 75,00,000 ರು. ವನ್ನು ವರ್ಗಾಯಿಸಿ ನಂತರ ವಾಪಾಸು ನೀಡದೆ ವಂಚಿಸಿರುವುದಾಗಿ ಸೆನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. 

See also  ಸಮುದ್ರದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, 3 ಸಿಬ್ಬಂದಿ ನಿಗೂಢ ನಾಪತ್ತೆ..! ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳ ಮೂಲಕ ಹುಡುಕಾಟ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget