ಕರಾವಳಿ

ಮದುವೆ ಹಿಂದಿನ ದಿನ ಬ್ಯೂಟಿ ಪಾರ್ಲರ್‌ಗೆ ತೆರಳಿದ ವಧು ಪ್ರಿಯಕರನೊಂದಿಗೆ ಪರಾರಿ, ಬೇಸತ್ತ ತಂದೆ ನೇಣು ಬಿಗಿದು ಆತ್ಮಹತ್ಯೆ

ನ್ಯೂಸ್ ನಾಟೌಟ್ : ಮದುವೆ ತಯಾರಿ ಭಜರ್ರಿಯಾಗಿ ನಡೆದಿತ್ತು. ಹೀಗಿದ್ದರೂ ಕೂಡ ಪ್ರೀತಿಗೆ ಮನಸೋತ ಮಧು ಮಗಳು ಮದುವೆ ಚಪ್ಪರದ ಹಿಂದಿನ ದಿನ ಪ್ರಿಯಕರನೊಂದಿಗೆ ಬೈಕ್‌ನಲ್ಲಿ ಓಡಿ ಹೋಗಿದ್ದು, ಇತ್ತ ವಧುವಿನ ತಂದೆ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಚಾಮರಾಜನಗರ ಎಂಬಲ್ಲಿ ನಡೆದಿದೆ. ಅವಮಾನವಾಯಿತು ತಂದೆ ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ. ಹೂರದಹಳ್ಳಿ ಗ್ರಾಮದ ಪುಟ್ಟೇಗೌಡ (೫೫) ತಮ್ಮ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ.

ಹೂರದಹಳ್ಳಿ ಗ್ರಾಮದ ಮೃತ ಪುಟ್ಟೇಗೌಡರ ಪುತ್ರಿ ಸುಚಿತ್ರಾಗೆ ನ.೧೮ ಮತ್ತು ೧೯ ರಂದು ಗುಂಡ್ಲುಪೇಟೆಯ ರಾಮಮಂದಿರದಲ್ಲಿ ಮದುವೆ ನಿಗದಿಯಾಗಿತ್ತು.ನ.೧೭ ರಂದು ಮಗಳು (ಸುಚಿತ್ರ) ಓಡಿ ಹೋದ್ದರಿಂದ ಬೇಸರಗೊಂಡ ಪುಟ್ಟೇಗೌಡ ಶನಿವಾರ ಬೆಳಗಿನ ಜಾವ ಜಮೀನಿಗೆ ಹೋಗಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತನ ಬಾವಮೈದ ಪುಟ್ಟಬುದ್ಧಿ ತೆರಕಣಾಂಬಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.ಲಗ್ನ ಕಟ್ಟಿಸಲು ಪುರೋಹಿತರ ಮನೆಗೆ ತೆರಳುವುದಕ್ಕೂ ಮುಂಚೆ ಮಗಳು ಸುಚಿತ್ರ ಬ್ಯೂಟಿ ಪಾರ್ಲರ್‌ಗೆ ಮೇಕಪ್‌ ಮಾಡಿಸುತ್ತೇನೆ ಎಂದು ಹೋಗಿದ್ದಾರೆ.ಸುಚಿತ್ರಳ ಪ್ರಿಯಕರ ಹೂರದಹಳ್ಳಿ ಗ್ರಾಮದ ಮಲ್ಲೇಶ್‌ ಬ್ಯೂಟಿ ಪಾರ್ಲರ್‌ಗೆ ಬಂದು ಕೆಲ ಕಾಲ ಮಾತನಾಡಿ ನಂತರ ಬೈಕ್‌ನಲ್ಲಿ ಪರಾರಿಯಾದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಸುಚಿತ್ರ ಪ್ರಿಯಕರನ ಜೊತೆ ಪರಾರಿಯಾದ ಹಿನ್ನೆಲೆ ಪುಟ್ಟೇಗೌಡ, ಶಿವೇಗೌಡ, ಪುಟ್ಟಬುದ್ಧಿ ಹೂರದಹಳ್ಳಿಗೆ ವಾಪಸ್‌ ತೆರಳಿದರು. ನಂತರ ಮಲ್ಲೇಶ ಮನೆಗೆ ಪುಟ್ಟೇಗೌಡ, ಪುಟ್ಟಬುದ್ದಿ, ತಾಯಮ್ಮನ ಜೊತೆ ಮಲ್ಲೇಶ ಮನೆಗೆ ತೆರಳಿ ಮಲ್ಲೇಶ್‌ ತಂದೆ ನಂಜುಂಡಪ್ಪ, ತಾಯಿ ರೇವಮ್ಮನ ವಿಚಾರಿಸಿದಾಗ ಗಲಾಟೆ ಮಾಡಿ ಕಳುಹಿಸಿದರು. ಮಗಳ ಬಗ್ಗೆ ಬೈದಾಡಿ ನೇಣು ಹಾಕಿಕೊಂಡ ಸಾಯುವಂತೆ ತೆಗಳಿದ್ದಾರೆ ಎಂದು ದೂರಿದ್ದಾರೆ.ಪುಟ್ಟಬುದ್ಧಿ ದೂರಿನ ಆಧಾರದ ಮೇಲೆ ಆರೋಪಿಗಳಾದ ಹೂರದಹಳ್ಳಿ ಗ್ರಾಮದ ನಂಜುಂಡಪ್ಪ, ಮಲ್ಲೇಶ್‌, ರೇವಮ್ಮನ ಮೇಲೆ ಐಪಿಸಿ ೩೦೬ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Related posts

ಬಾಲಕಿ ಮೇಲೆ ನಿರಂತರ ಅತ್ಯಾಚಾರ; ವೃದ್ಧನಿಗೆ 81 ವರ್ಷ ಜೈಲು ಶಿಕ್ಷೆ

ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಎತ್ತಿಕೊಂಡೇ ಸಹಾಯಕ್ಕಾಗಿ ಓಡಿದ ಯುವಕ..!

ಸ್ಕಾರ್ಫಿಯೊ ಕಾರಿನಲ್ಲಿ ಬಂದು ಶಾಸಕ ಹರೀಶ್ ಪೂಂಜಾರ ಕಾರಿನತ್ತ ತಲ್ವಾರ್ ಝಳಪಿಸಿದವ ಯಾರು?