ಕರಾವಳಿಪುತ್ತೂರು

ಪುತ್ತೂರು:ಕಾಂಗ್ರೆಸ್ ಮುಖಂಡ ಸೇರಿದಂತೆ ಮನೆಮಂದಿಯನ್ನು ಕಟ್ಟಿ ಹಾಕಿ ಮನೆ ದರೋಡೆ ಮಾಡಿದ್ದ ಪ್ರಕರಣ,6 ಮಂದಿ ಬಂಧನ;ಆರೋಪಿಗಳ ಹಿನ್ನಲೆಯೇನು?

201

ನ್ಯೂಸ್ ನಾಟೌಟ್ :ಕಾಂಗ್ರೆಸ್ ಮುಖಂಡನ ಮನೆಮಂದಿಯನ್ನು ಕಟ್ಟಿಹಾಕಿ ಮನೆ ದರೋಡೆ ಮಾಡಿದ್ದ ಬೆಚ್ಚಿ ಬೀಳಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಈ ಬಗ್ಗೆ  ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ರಿಷ್ಯಂತ್ ಅವರು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. 

ಕೇರಳ ಮೂಲದ ಐವರು ಮತ್ತು ವಿಟ್ಲದ ಪೆರುವಾಯಿಯ ಮೂಲದ ಕುಖ್ಯಾತರ ಬಂಧನವಾಗಿದೆ.ರವಿ, ವಸಂತ, ಸುಧೀರ್, ಸನಲ್ ಕೆ.ವಿ., ಕಿರಣ್, ಮಹಮ್ಮದ್ ಫೈಝಲ್, ಅಬ್ದುಲ್ ನಿಸಾರ್ ಆರೋಪಿಗಳು. ಈ ಪೈಕಿ ರವಿ ಎಂಬ ಆರೋಪಿಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.ಆತ ಪೆರೋಲ್ ಮೇಲೆ ರಜೆ ಪಡೆದು ಆಗಮಿಸಿದ್ದ ಆರೋಪಿಯಾಗಿದ್ದು, ಈ ವೇಳೆ ಉಳಿದ ಆರು ಮಂದಿಯ ಜೊತೆ ಸೇರಿ ದರೋಡೆಯಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.

ಆರು ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು,ದರೋಡೆ ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಮೇಲೆ ಪುತ್ತೂರು ಹಾಗೂ ವಿಟ್ಲ ಠಾಣೆಯಲ್ಲಿ ಮೊಕದ್ದಮೆ, ವಸಂತ ಎಂಬವನ ಮೇಲೆ ಬದಿಯಡ್ಕ, ಕುಂಬಳೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ. ಇನ್ನು ಕಿರಣ್ ಎಂಬಾತನ ಮೇಲೆ ಬಂಟ್ವಾಳ, ಬರ್ಕೆ, ಮಂಜೇಶ್ವರ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿದೆ. ಕುಖ್ಯಾತ ದರೋಡೆಕೋರ ಸನಲ್ ಕೆ.ವಿ.ಎಂಬಾತನ ಮೇಲೆ ಕೇರಳ ರಾಜ್ಯವೊಂದರಲ್ಲೇ ಒಟ್ಟು 15 ಪ್ರಕರಣಗಳು ದಾಖಲಾಗಿವೆ.ಮಹಮ್ಮದ್ ಫೈಝಲ್ ಮೇಲೆ ಪುತ್ತೂರು, ವಿಟ್ಲ, ಮಂಜೇಶ್ವರ, ಕುಂಬಳೆಯಲ್ಲಿ ಪ್ರಕರಣ ದಾಖಲಾಗಿದ್ದು,ಅಬ್ದುಲ್ ನಿಸಾರ್ ಮೇಲೆ ಪುತ್ತೂರು, ವಿಟ್ಲ, ಮಂಜೇಶ್ವರದಲ್ಲಿ ಪ್ರಕರಣ ದಾಖಲಿದೆ ಎಂದು ಮಾಹಿತಿ ನೀಡಿದರು.

ಈ ಆರು ಆರೋಪಿಗಳು ಮತ್ತು ಪೆರೋಲ್ ನಲ್ಲಿ ಬಂದಿದ್ದ ರವಿ ಜೊತೆಗೂಡಿ ದರೋಡೆ ಕೃತ್ಯ ನಡೆಸಿದ್ದರು. ಸೆ.7 ರಂದು ಬಡಗನ್ನೂರು ಗ್ರಾಮದ ಕುದ್ಕಾಡಿಯಲ್ಲಿ ನಡೆದಿದ್ದ ಘಟನೆಯಿದು.ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಗುರುಪ್ರಸಾದ್ ರೈ ಎಂಬವರ ಮನೆಗೆ ಬೆಳಗ್ಗೆ ಸುಮಾರು 2 ಗಂಟೆಯ ಅವಧಿಯಲ್ಲಿ ದರೋಡೆಕೋರರು ಮನೆಗೆ ನುಗ್ಗಿದ್ದರು.

ಮನೆಯ ಬಾಗಿಲು ಮುರಿದು ಚಿನ್ನಾಭರಣ ಲೂಟಿ ಮಾಡಿದ್ದ ಅವರು ಎಂಟು ಪವನ್ ಚಿನ್ನ, 30 ಸಾವಿರ ನಗದು ದರೋಡೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ರಿಷ್ಯಂತ್, ಡಿವೈಎಸ್ಪಿ ಗಾನ ಪಿ ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದರು. ಕೊನೆಗೂ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಎಸ್ಪಿ ರಿಷ್ಯಂತ್ ಅವರು ಹಸ್ತಾಂತರಿಸಿದರು.

See also  ಸುಳ್ಯ ಶೂಟೌಟ್ ನ ಹಿಂದೆ ಬಿಜೆಪಿ ಮುಖಂಡ ಕಳಗಿ ಕೊಲೆ ಹಂತಕರು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget