Latestಬೆಂಗಳೂರು

ತನಗಾದ ಅನ್ಯಾಯ ಹಾಗೂ ಅತ್ಯಾಚಾರ ದೂರು ಕೊಡಲು ಹೋದ ಅಪ್ರಾಪ್ತೆ,  ರಕ್ಷಿಸಬೇಕಾದ ಪೊಲೀಸ್ ಕಾನ್‌ಸ್ಟೇಬಲೇ ಮತ್ತೆರಡು ಬಾರಿ ಆಕೆಯನ್ನು ರೇಪ್ ಮಾಡಿದ!

796
Spread the love

ನ್ಯೂಸ್‌ ನಾಟೌಟ್: ನಮ್ಮ ಹಿರಿಯರು ಗಾದೆ ಮಾತೊಂದನ್ನು ಹೇಳೋದನ್ನು ನಾವೆಲ್ಲ ಕೇಳಿದ್ದೇವೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂತ.ರಕ್ಷಣೆಗಂತ ಹೊಲ ಸುತ್ತ ಬೇಲಿ ಹಾಕಿದ್ರೆ ಅದೇ ಬೇಲಿ ಎದ್ದು ಕೊಂಡು ಹೋಗಿ ಹೊಲ ಮೇಯ್ದರೆ ಬೇಲಿಯನ್ನು ರಕ್ಷಣೆಗಂತ ಹಾಕಿದ್ದು ಯಾಕೆ?ಅಥವಾ ಆ ಬೇಲಿ ಮೇಲೆ ನಂಬಿಕೆ ಇಡೋದಾದರೂ ಹೇಗೆ? ಹೀಗೆ ಈ ಗಾದೆ ಮಾತನ್ನೇ ನೆನಪಿಸುತ್ತಿದೆ ಇಲ್ಲೊಂದು ಘಟನೆ.

ಹೌದು, ಈ ಘಟನೆ ರಾಜ್ಯದ ರಾಜಧಾನಿ ಬೆಂಗಳೂರನ್ನೇ ಗಡ ಗಡ ನಡುಗಿಸಿದೆ. ತನ್ನನ್ನು ಪ್ರೀತಿಸಿ, ಮದುವೆ ಮಾಡಿಕೊಳ್ಳುವುದಾಗಿ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ಕೊಡಲು ಹೋದ ಯುವತಿಯನ್ನೇ ಪೊಲೀಸ್ ಕಾನ್ಸ್ ಸ್ಟೇಬಲ್ ನ್ಯಾಯ ಕೊಡಿಸುವುದಾಗಿ ನಂಬಿಸಿ ಆತನೇ ಮತ್ತೆ ಎರಡು ಬಾರಿ ಅತ್ಯಾಚಾರ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ಪುಸಲಾಯಿಸಿದ ಯುವಕನೊಬ್ಬ ಬಾಲಕಿಯ ಮೇಲೆ ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಇದಾದ ನಂತರ ತಾನು ಪ್ರೀತಿಸಿದ ಯುವಕನಿಗೆ ಈಗಾಗಲೇ ಮದುವೆ ಆಗಿದ್ದು, ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಯುವತಿ ಆತನ ಮೇಲೆ ಅತ್ಯಾಚಾರದ ದೂರು ದಾಖಲು ಮಾಡಲು ಪೊಲೀಸ್ ಠಾಣೆಗೆ ಬಂದಿದ್ದಾಳೆ. ಆದರೆ, ಬೊಮ್ಮನಹಳ್ಳಿ ಠಾಣೆಯ ಕಾನ್ಸ್ ಸ್ಟೇಬಲ್ ತಾನು ನ್ಯಾಯ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿ, ಕೆಲಸ ಕೊಡಿಸುವ ಭರವಸೆ ನೀಡಿದ್ದಾನೆ. ಇದಾದ ನಂತರ ವಿಚಾರಣೆಗೆ ಹೋಗೋದಿದೆ ಎಂದು ಒಯೋ ಲಾಡ್ಜ್ ಗೆ ಕರೆದೊಯ್ದು, ಆಕೆ ಅಪ್ರಾಪ್ತೆ ಎಂಬುದನ್ನೂ ನೋಡದೇ, ತಾನೊಬ್ಬ ಸಮಾಜದ ರಕ್ಷಕ ಎಂಬುದನ್ನೂ ಅರಿತುಕೊಳ್ಳದೇ ನೀಚ ಕೃತ್ಯ ಎಸಗಿದ್ದಾನೆ.

ಬಾಲಕಿ ಈ ವಿಚಾರವನ್ನು ಪೋಷಕರಿಗೆ ಹೇಳುವುದಾಗಿ ತಿಳಿಸಿದಾಗ ನಿನ್ನೊಂದಿಗೆ ಖಾಸಗಿಯಾಗಿ ಕಳೆದ ಫೋಟೋ ಮತ್ತು ವಿಡಿಯೋಗಳು ನನ್ನ ಬಳಿ ಇದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಿನ್ನ ಮತ್ತು ನಿಮ್ಮ ಕುಟುಂಬದ ಮಾನ ಹರಾಜು ಹಾಕುವುದಾಗಿ ಪೊಲೀಸ್ ಕಾನ್ಸ್ ಸ್ಟೇಬಲ್ ಬೆದರಿಕೆ ಹಾಕಿದ್ದಾನೆ. ನಂತರ, ಪುನಃ ಅತ್ಯಾಚಾರ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಪುಸಲಾಯಿಸಿ ತನ್ನೊಂದಿಗೆ ಬರುವಂತೆ ಕರೆಯುತ್ತಾನೆ. ಮತ್ತೊಮ್ಮೆ ಒಯೋ ಲಾಡ್ಜ್ ಗೆ ಕರೆದೊಯ್ದು, ಆಕೆಯ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ಮಾಡುತ್ತಾನೆ. ಇದರಿಂದ ಅಪ್ರಾಪ್ತ ಯುವತಿ ನ್ಯಾಯ ಕೇಳಲು ಹೋಗಿ ಮತ್ತೊಮ್ಮೆ ಅನ್ಯಾಯಕ್ಕೆ ಒಳಗಾಗಿದ್ದಾಳೆ.ಯುವತಿ ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ಈ ಬಗ್ಗೆ ಯುವತಿ ತಾಯಿ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಅತ್ಯಾಚಾರ ಆರೋಪಿಯಾದ ಪ್ರಿಯಕರ ವಿಕ್ಕಿ ಹಾಗೂ ನ್ಯಾಯ ಕೊಡಿಸುವುದಾಗಿ ಅತ್ಯಾಚಾರ ಮಾಡಿದ ಪೊಲೀಸ್ ಕಾನ್ಸ್ ಸ್ಟೇಬಲ್ ಅರುಣ್ ಇಬ್ಬರನ್ನೂ ಬಂಧಿಸಲಾಗಿದೆ.ಇಬ್ಬರು ಆರೋಪಿಗಳನ್ನು ಬಂಧಿಸಿ ಆಗ್ರಹಾರ ಜೈಲಿಗಟ್ಟಲಾಗಿದೆ.

  Ad Widget   Ad Widget   Ad Widget