ಕ್ರೈಂ

ಬೆಳ್ತಂಗಡಿ: ಕೊಳೆತ ಸ್ಥಿತಿಯಲ್ಲಿ ಪೌರ ಕಾರ್ಮಿಕನ ಶವ ಪತ್ತೆ

ಬೆಳ್ತಂಗಡಿ: ಇಲ್ಲಿನ ನಗರ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕ ನಿಂಗ ಶೆಟ್ಟಿ (43 ) ಅನುಮಾನಸ್ಪದವಾಗಿ ಸಾವಿಗೀಡಾದ ಘಟನೆ ನಡೆದಿದೆ. ಮಾರಿ ಗುಡಿ ದೇವಸ್ಥಾನದ ಬಳಿ ಇರುವ ಮೈದಾನದಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸಹಜ ಸಾವು ಅಥವಾ ಕೊಲೆಯೋ ಅನ್ನುವುದರ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಮೂಲತಃ ಮೈಸೂರಿನವರಾಗಿರುವ ನಿಂಗ ಶೆಟ್ಟಿ ಹಲವು ವರ್ಷಗಳಿಂದ ಪೌರ ಕಾರ್ಮಿಕರಾಗಿ ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

Related posts

ಕಲ್ಲುಗುಂಡಿ: ತಾಯಿಗೆ ಆಮಿಷವೊಡ್ಡಿ ಅಪ್ರಾಪ್ತ ಮಗಳನ್ನು ಅತ್ಯಾಚಾರ ಗೈದ ಆರೋಪಿಗೆ ಜಾಮೀನು

ಮದುವೆಗೆ ನಿರಾರಿಸಿದ ಹುಡುಗಿ, ಮನನೊಂದು ಯುವಕ ಆತ್ಮಹತ್ಯೆ..! ನಾನು ಒಬ್ಬ ಹುಚ್ಚು ಪ್ರೇಮಿ ಎಂದು ವಾಟ್ಸಪ್‌ ನಲ್ಲಿ ಸ್ಟೇಟಸ್ ಹಾಕಿ ನೇಣಿಗೆ ಶರಣು..!

ಬೆಕ್ಕನ್ನು ರಕ್ಷಿಸಲು ಹೋದ ಐವರ ದುರ್ಮರಣ..! ಪಾಳು ಬಾವಿಯೊಳಗೆ ಹಗ್ಗಕಟ್ಟಿ ಇಳಿದ್ರೂ ಬದುಕಲಿಲ್ಲವೇಕೆ..?