ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಏಷ್ಯಾಕಪ್ ಕ್ರಿಕೆಟ್‌ ಮೊದಲೆರಡು ಪಂದ್ಯಗಳಿಂದ ಕನ್ನಡಿಗ ಕೆ.ಎಲ್. ರಾಹುಲ್ ಔಟ್..! ರಾಹುಲ್ ಬದಲಿಗೆ ಯಾರಿಗೆ ಸಿಗುತ್ತೆ ಸ್ಥಾನ..?

ನ್ಯೂಸ್ ನಾಟೌಟ್: ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಆಘಾತಕಾರಿ ಸಂಗತಿಯನ್ನು ಹೊರಹಾಕಿದ್ದಾರೆ.

ಹೌದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಭಾರತ ತಂಡದ ಮೊದಲೆರಡು ಪಂದ್ಯಗಳಿಗೆ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ಹೇಳಿದ್ದಾರೆ. ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಈ ವಿಚಾರ ಬಹಿರಂಗಪಡಿಸಿದ್ದಾರೆ. ಭಾರತದ ಮೊದಲ ಗುಂಪಿನ ಪಂದ್ಯದಲ್ಲಿ ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ಮತ್ತು ಇನ್ನೊಂದು ಸೆಪ್ಟೆಂಬರ್ 4 ರಂದು ನೇಪಾಳದ ವಿರುದ್ಧ ನಡೆಯಲಿದೆ.

“ಕೆಎಲ್ ರಾಹುಲ್ ನಿಜವಾಗಿಯೂ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಆದರೆ ಏಷ್ಯಾ ಕಪ್‌ನ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ಭಾರತದ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ” ಎಂದು ದ್ರಾವಿಡ್ ಹೇಳಿಕೆಯನ್ನು ಉಲ್ಲೇಖಿಸಿ ಬಿಸಿಸಿಐ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.

ಮೊದಲ ಎರಡು ಪಂದ್ಯಗಳ ನಂತರ ವಿಕೆಟ್‌ ಕೀಪರ್-ಬ್ಯಾಟ್ಸ್ ಮನ್‌ ಪುನರಾಗಮನ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ದ್ರಾವಿಡ್ ಹೇಳಿದ್ದಾರೆ ಎನ್ನಲಾಗಿದೆ.ಅಂತೆಯೇ ಕೆಎಲ್ ರಾಹುಲ್ ಟೂರ್ನಿಗೆ ಸೇರುವರೇ ಎಂಬುದು ಸೆಪ್ಟೆಂಬರ್ 4ರಂದು ನಿರ್ಧಾರವಾಗಲಿದೆ ಎಂದು ದ್ರಾವಿಡ್ ಬಹಿರಂಗಪಡಿಸಿದ್ದಾರೆ.

“ಮುಂದಿನ ಕೆಲವು ದಿನಗಳ ತನಕ ಕೆ.ಎಲ್. ರಾಹುಲ್ NCA ನಲ್ಲಿದ್ದು ತರಬೇತಿ ಪಡೆಯಲಿದ್ದಾರೆ. ನಂತರ ಸೆಪ್ಟಂಬರ್ 4 ರಂದು ಅವರನ್ನು ತಪಾಸಣೆಗೆ ಒಳಪಡಿಸಿ ಮತ್ತೊಮ್ಮೆ ಫಿಟ್ ಆಗಿದ್ದಾರಾ ಅನ್ನುವುದನ್ನು ಚೆಕ್ ಮಾಡುತ್ತೇವೆ. ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ಒಂದು ವೇಳೆ ಕೆ.ಎಲ್. ರಾಹುಲ್‌ಗೆ ಆಡಲು ಸಾಧ್ಯವಾಗದಿದ್ದರೆ ಅವರ ಸ್ಥಾನಕ್ಕೆ ಭಾರತ ತಂಡಕ್ಕೆ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರಲ್ಲಿ ಒಬ್ಬರು ಆಯ್ಕೆ ಆಗುವ ಸಾಧ್ಯತೆ ಇದೆ.

Related posts

ತಂಗಿಯ ಸಮಾಧಿ ಸ್ಥಳದಲ್ಲಿ ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್..! ವೀಕ್ಷಕರಿಂದ ತೀವ್ರ ಆಕ್ರೋಶ

ಸಿಎಂ ಬಡವರ ಖಾತೆಗೆ 5 ಸಾವಿರ ರೂ. ಹಾಕುತ್ತಾರೆ ಎಂದು ವಾಟ್ಸಪ್‌ ನಲ್ಲಿ ಸಂದೇಶ ಹರಿಬಿಟ್ಟ ಕಿಡಿಗೇಡಿಗಳು..! ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ನೂರಾರು ಜನ..!

ಗುತ್ತಿಗಾರು:ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಅಗ್ನಿ ರಕ್ಷಕ ಸೇವೆ”ಲೋಕಾರ್ಪಣೆ,ಯೋಗ ತರಬೇತಿ ಶಿಬಿರ ಸಮಾರಂಭ-ರಾಷ್ಟ್ರಮಟ್ಟದ ಪ್ರತಿಭೆಗಳಿಗೆ ಸನ್ಮಾನ