ಕರಾವಳಿಕೊಡಗು

ಸಿಎಂ ಕಾರ್ಯಕ್ರಮ ಹಿನ್ನೆಲೆ, ಒಕ್ಕಲಿಗರ ಪ್ರೀಮಿಯರ್ ಲೀಗ್ 2024 ಅಂತರ್ ಜಿಲ್ಲಾ ಕ್ರಿಕೆಟ್ ಕೂಟ ಮುಂದೂಡಿಕೆ, ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ ನೋಡಿ

ನ್ಯೂಸ್ ನಾಟೌಟ್: ಯುವ-ಘಟಕ-ಒಕ್ಕಲಿಗರ ಯಾನೆ ಗೌಡ ಸೇವಾ ಸಂಘ (ರಿ) ಮಂಗಳೂರು ಆಯೋಜಿಸುತ್ತಿರುವ ಒಕ್ಕಲಿಗರ ಪ್ರೀಮಿಯರ್ ಲೀಗ್ 2024 ಅಂತರ್ ಜಿಲ್ಲಾ ಕ್ರಿಕೆಟ್ ಕೂಟ ಫೆ.18ರಿಂದ ಆರಂಭವಾಗಲಿದೆ. ಅಡ್ಯಾರಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಕೂಟ ಫೆ.19ರಂದು ಮುಕ್ತಾಯಗೊಳ್ಳಲಿದೆ.

ಕೂಟದ ಉದ್ಘಾಟನೆ ಫೆ.18ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನೆರವೇರಲಿದೆ. ಸಮಾರೋಪ ಸಮಾರಂಭವು ಫೆ.19ರ ಸೋಮವಾರದಂದು ಸಂಜೆ 7 ಗಂಟೆಗೆ ನಡೆಯಲಿದೆ. ಈ ಕೂಟದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ , ಕಾಸರಗೋಡು ಜಿಲ್ಲೆಯ ಒಕ್ಕಲಿಗ ಸಮುದಾಯದ ತಂಡಗಳು ಪಾಲ್ಗೊಳ್ಳಲಿವೆ. ಈಗಾಗಲೇ ಕೂಟದಲ್ಲಿ ಪಾಲ್ಗೊಳ್ಳಲು 32 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಈ ಹಿಂದೆ ಫೆ.17 ಹಾಗೂ ಫೆ.18ರಂದು ಕೂಟ ನಡೆಸಲು ದಿನ ನಿಗದಿಯಾಗಿತ್ತು. ಆದರೆ ಫೆ.17 ರಂದು ಕಾಂಗ್ರೆಸ್ ಸಮಾವೇಶ ಅದೇ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆಯಲಿರುವುದರಿಂದ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಕೂಟವನ್ನು ಫೆ.18 ಮತ್ತು ಫೆ.19ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ಯುವ-ಘಟಕ-ಒಕ್ಕಲಿಗರ ಯಾನೆ ಗೌಡ ಸೇವಾ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ತಿಳಿಸಿದ್ದಾರೆ.

Related posts

ಆಮಂತ್ರಣ ಇಲ್ಲದೆ ಮದುವೆ ಮನೆಯಲ್ಲಿ ಊಟ ಮಾಡಿದ ವಿದ್ಯಾರ್ಥಿಗೆ ಇದೆಂತಹ ಶಿಕ್ಷೆ..?

ಇಂದಿನಿಂದ(ಆ.1) ಎಲ್.​ಪಿ.ಜಿ ಸಿಲಿಂಡರ್ ಬೆಲೆ ಏರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಮಾಜಿ ಬಿಗ್‌ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ..! ಹೊಡೆದಾಡಿಕೊಂಡ ಜೋಡಿ, ಪೊಲೀಸರ ಮಧ್ಯ ಪ್ರವೇಶ..!