ನ್ಯೂಸ್ ನಾಟೌಟ್: ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮಾಜಿ ಪತ್ನಿ ಹಸೀನಾ ಜಹಾನ್ ಹಾಗೂ ಮಗಳಿಗೆ ಜೀವನಾಂಶ ನೀಡಲು ಕೋಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ. ಮಾಜಿ ಪತ್ನಿ ಹಸೀನಾ ಜಹಾನ್ ಗೆ ತಿಂಗಳಿಗೆ 1.5 ಲಕ್ಷ ರೂಪಾಯಿ ಹಾಗೂ ಮಗಳಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಹಣ ನೀಡಲು ಹೈಕೋರ್ಟ್ ಆದೇಶ ನೀಡಿದೆ.
ಪತ್ನಿ, ಮಗಳಿಗೆ ಒಟ್ಟಾರೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಈ ಮೊತ್ತವನ್ನು ಕಳೆದ 7 ವರ್ಷಗಳ ಹಿಂದಿನಿಂದ ಲೆಕ್ಕ ಹಾಕಿ ನೀಡಲು ಹೈಕೋರ್ಟ್ ಆದೇಶ ನೀಡಿದೆ. 2023 ರಲ್ಲಿ ಜಿಲ್ಲಾ ಕೋರ್ಟ್ ಪ್ರತಿ ತಿಂಗಳು 1.30 ಲಕ್ಷ ರೂಪಾಯಿ ಜೀವನಾಂಶ ನೀಡಲು ಆದೇಶಿಸಿತ್ತು. ಈಗ ಹೈಕೋರ್ಟ್ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಜೀವನಾಂಶವಾಗಿ ನೀಡಲು ಆದೇಶಿಸಿದೆ. ಹೈಕೋರ್ಟ್‌ನ ಈ ಆದೇಶದಿಂದಾಗಿ ಮೊಹಮ್ಮದ್ ಶಮಿ ಪರ ಅಭಿಮಾನಿಗಳು ಅನುಕಂಪ ವ್ಯಕ್ತಪಡಿಸಿದ್ದಾರೆ.
ಮಗಳ ಶಿಕ್ಷಣ ವೆಚ್ಚ, ವಿಚ್ಛೇದನಕ್ಕೂ ಮುನ್ನ ಹಸೀನಾ ಜಹಾನ್ ಜೀವನ ಮಟ್ಟ ಪರಿಗಣಿಸಿ ಈ ಆದೇಶ ನೀಡಿದ್ದಾಗಿ ಹೈಕೋರ್ಟ್ ಹೇಳಿದೆ. ಮೊಹಮ್ಮದ್ ಶಮಿ ಆದಾಯ, ಹಣಕಾಸಿನ ಸ್ಥಿತಿಯು ಹೆಚ್ಚಿನ ಜೀವನಾಂಶ ನೀಡುವಂತೆ ಆದೇಶ ನೀಡಲು ಕಾರಣವಾಗಿದೆ. ಹಸೀನಾ ಜಹಾನ್ ಇನ್ನೂ ಬೇರೆಯವರನ್ನು ವಿವಾಹವಾಗಿಲ್ಲ, ಮಗಳ ಜೊತೆ ಪ್ರತೇಕವಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಪತ್ನಿ, ಮಗಳಿಗೆ ತಿಂಗಳಿಗೆ 4 ಲಕ್ಷ ಜೀವನಾಂಶ ನೀಡುವಂತೆ ಆದೇಶ ನೀಡಿದ್ದಾಗಿ ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ತಮಗೆ ಹೆಚ್ಚಿನ ಜೀವನಾಂಶ ನೀಡುವಂತೆ ಹೈಕೋರ್ಟ್ ಆದೇಶ ನೀಡಿರುವುದಕ್ಕೆ ಹಸೀನಾ ಜಹಾನ್ ಖುಷಿಯಾಗಿದ್ದಾರೆ. ತಮ್ಮ ಪರ ಆದೇಶ ನೀಡಿದ ಹೈಕೋರ್ಟ್ಗೆ ಹಸೀನಾ ಜಹಾನ್ ಧನ್ಯವಾದ ಹೇಳಿದ್ದಾರೆ. ಈ ಮೊದಲು ಮಗಳನ್ನು ಉತ್ತಮ ಸ್ಕೂಲ್ಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಈಗ ಉತ್ತಮ ಸ್ಕೂಲ್ ಗೆ ಸೇರಿಸುತ್ತೇನೆ ಎಂದು ಹಸೀನಾ ಜಹಾನ್ ಹೇಳಿದ್ದಾರೆ. ತನಗೆ, ಮಗಳಿಗೆ ತಿಂಗಳಿಗೆ ಒಟ್ಟಾರೆ 10 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಹಸೀನಾ ಜಹಾನ್ ಹೈಕೋರ್ಟ್ ನಲ್ಲಿ ಮನವಿ ಮಾಡಿದ್ದರು.
ಹೈಕೋರ್ಟ್ ಅಂತಿಮವಾಗಿ ಮೊಹಮ್ಮದ್ ಶಮಿಯ ಆದಾಯ, ಖರ್ಚು, ಹಸೀನಾ ಜಹಾನ್ ಖರ್ಚುವೆಚ್ಚ, ಮಗಳ ಶಿಕ್ಷಣದ ಖರ್ಚುವೆಚ್ಚ ಪರಿಗಣಿಸಿ, ತಿಂಗಳಿಗೆ ಒಟ್ಟಾರೆ ತಾಯಿ, ಮಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಆದೇಶ ನೀಡಿದೆ.