ಭಕ್ತಿಭಾವ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಭೇಟಿ

ನ್ಯೂಸ್ ನಾಟೌಟ್: ಭಾರತ ಕ್ರಿಕೆಟ್ ತಂಡದ ಆಟಗಾರ ಕೆ. ಎಲ್ ರಾಹುಲ್ ಇಂದು (ಬುಧವಾರ) ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕೆ.ಎಲ್ ರಾಹುಲ್ ಅವರು ಪ್ರತಿ ವರ್ಷವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ಪ್ರಸಾದ ಸ್ವೀಕರಿಸುತ್ತಾರೆ. ಈ ಬಾರಿಯೂ ಆಗಮಿಸಿ ದೇವರಿಗೆ ಅರ್ಚನೆ ಮಾಡಿಸಿದರು. ಈ ದೇವಸ್ಥಾನಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ, ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ದೇವಾಲಯದ ವತಿಯಿಂದ ಕೆ.ಎಲ್ ರಾಹುಲ್ ಅವರನ್ನು ಗೌರವಿಸಲಾಯಿತು.

Related posts

ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಗೆ ಹರಿದು ಬಂದ ಹೊರೆಕಾಣಿಕೆ

ದೊಡ್ಡಡ್ಕ ಕೊರಗಜ್ಜನ ಸನ್ನಿಧಿಯಲ್ಲಿ ಜನಜಾತ್ರೆ

ತೊಡಿಕಾನ: ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ದಲ್ಲಿ ಗೋಪೂಜೆ