Latest

ಕಸದ ತೊಟ್ಟಿಯಲ್ಲಿ ಸಿಕ್ಕಿದ ಹೆಣ್ಣು ಕೂಸಿಗೆ ಒಲಿದ ಅದೃಷ್ಟ ದೇವತೆ!ಭಾರತದ ಕುವರಿ ಇಂದು ಅಂತರರಾಷ್ಟ್ರೀಯ ಕ್ರಿಕೆಟ್​ ತಂಡದ ಅಧ್ಯಕ್ಷೆ!!ಈಕೆಯ ರೋಚಕ ಕಥೆಯನ್ನು ನೀವೂ ಓದಿ

866

ನ್ಯೂಸ್‌ ನಾಟೌಟ್:ಅಪ್ಪ – ಅಮ್ಮನಿಗೆ ಬೇಡವಾಗಿ ಕಸದ ತೊಟ್ಟಿಯಲ್ಲಿದ್ದ ಮಗು ಇಂದು ಸಾಧನೆಯ ಪಥದಲ್ಲಿರುವ ಮಹಿಳೆಯಾಗಿ ಬೆಳೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.ಅಂದು ಅವರ ಕಣ್ಣಿಗೆ ಬೀಳದೇ ಇರುತ್ತಿದ್ದರೆ ಈ ಮಗು ಯಾವುದೋ ಹದ್ದುಗಳ,ಬೀದಿ ನಾಯಿಗಳ ಹಂದಿಗಳ ಪಾಲಾಗುತ್ತಿತ್ತೋ ಏನೋ..ಆದರೆ, ವಿಧಿಯ ಲೀಲೆಯೇ ಬೇರೆಯಾಗಿತ್ತು. ಆ ಪುಟಾಣಿ ಯಾರದ್ದೋ ದಾರಿಹೋಕರ ಕಣ್ಣಿಗೆ ಬಿದ್ದಳು. ಅವರು ಮಗುವನ್ನು ರಕ್ಷಿಸಿ ಅನಾಥಾಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಮುಂದೆ ಸಿಕ್ಕಿದ್ದೇ ರೋಚಕ ತಿರುವು. 

ಅದು 1979ರ ಅವಧಿ.ಪುಣೆಯಲ್ಲಿ ಹುಟ್ಟಿತ್ತು ಮುದ್ದು ಕಂದಮ್ಮ. ಅದ್ಯಾವ ತಾಯಿ-ತಂದೆ ಹುಟ್ಟಿದ ಮಗುವೋ ಗೊತ್ತಿಲ್ಲ.ಒಟ್ಟಿನಲ್ಲಿ ಮಾತೃ ಹೃದಯ ಎನ್ನುವುದು ಅಲ್ಲಿ ಕೆಲಸ ಮಾಡಲೇ ಇಲ್ಲ. ಹಸುಗೂಸನ್ನು ತಂದು ಕಸದ ತೊಟ್ಟಿಯಲ್ಲಿ ಎಸೆದು ಹೋಗಿಬಿಟ್ಟಳು.ಆದರೆ ಅದೇ ಮಗು ಇಂದು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಬಿರುದು ಪಡೆದಿದೆ. ಮಾತ್ರವಲ್ಲ ಆಸ್ಟ್ರೇಲಿಯಾದ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಕೂಡ ಆಗಿದ್ದ ಲಿಸಾ ಸ್ಥಾಲೇಕರ್​ ಅವರ ಕುತೂಹಲದ ಜೀವನ ಚರಿತ್ರೆ ಓದಿದ್ರೆ ಒಂದು ಕ್ಷಣ ಮೈ ರೋಮಾಂಚನವಾಗುತ್ತೆ.

ಅದೃಷ್ಟ ಜೊತೆಗಿದ್ದರೆ ವಿಶ್ವಮಟ್ಟದಲ್ಲಿಯೂ ಮಿಂಚಬಹುದು.ಅದೃಷ್ಟ ಕೈಕೊಟ್ಟರೆ ಬೀದಿಪಾಲೂ ಆಗಬಹುದು ಎನ್ನುವ ಮಾತಿದೆ. ಆದರೆ ಅದೃಷ್ಟವೊಂದು ಜೊತೆಗಿದ್ದರೆ ಮನುಷ್ಯ ಕಸದ ತೊಟ್ಟಿಯಿಂದ ವಿಶ್ವಖ್ಯಾತಿಯನ್ನೂ ಪಡೆಯಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತವರು,  ಲಿಸಾ ಸ್ಥಾಲೇಕರ್​. 

ಅನಾಥಾಶ್ರಮದಲ್ಲಿದ್ದ ಪುಟ್ಟ ಕಂದನನ್ನು ಆಸ್ಟ್ರೇಲಿಯಾದ ದಂಪತಿ ದತ್ತು ಪಡೆದರು.ಭಾರತದ ಮಗು ಬೇಕು ಎಂದು ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದ ಅವರ ಕಣ್ಣಿಗೆ ಬಿದ್ದದ್ದು ಇದೇ ತೊಟ್ಟಿಯಲ್ಲಿ ಸಿಕ್ಕ ಹೆಣ್ಣು ಕೂಸು.ಆಕೆಯನ್ನು ದತ್ತು ಪಡೆದು ಲಿಸಾ ಎಂದು ನಾಮಕರಣ ಮಾಡಿದರು.ಲಿಸಾಲ ದತ್ತು ತಂದೆ ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಿದ್ದರು.ಆದ್ದರಿಂದ ತಮ್ಮ ಈ ಮಗಳನ್ನೂ ಕ್ರಿಕೆಟಿಗರನ್ನಾಗಿ ಮಾಡಬೇಕು ಎನ್ನುವುದು ಅವರ ಕನಸಿನ ಕೂಸು ಆಗಿತ್ತು. ಅದರಂತೆ ತರಬೇತಿಗೆ ಕಳುಹಿಸಿದರು. ಲಿಸಾ ಕೂಡ ಕ್ರಿಕೆಟ್​ ಪ್ರೀತಿಸತೊಡಗಿದರು.ಅದರಲ್ಲಿಯೇ ಸಾಕಷ್ಟು ಶ್ರಮ ವಹಿಸಿ ಅಭ್ಯಾಸ ಮಾಡಿದರು. ನಂತರ ಅವರು  ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ಆಡಿದರು.ಕ್ಯಾಪ್ಟನ್​ ಕೂಡ ಆದರು. 187 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದ ಲಿಸಾ,  2010 ರ T 20 ವಿಶ್ವಕಪ್ ಫೈನಲ್‌ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ನ್ಯೂಜಿಲೆಂಡ್ ವಿರುದ್ಧ 106 ರನ್ ಗಳಿಸುವಲ್ಲಿ ತಂಡಕ್ಕೆ ಸಹಾಯ ಮಾಡಿದ್ದರು. 2007 ಮತ್ತು 2008 ರಲ್ಲಿ ಆಸ್ಟ್ರೇಲಿಯಾದ ಅತ್ಯುತ್ತಮ ಮಹಿಳಾ ಅಂತರರಾಷ್ಟ್ರೀಯ ಆಟಗಾರ್ತಿಗೆ ನೀಡಲಾಗುವ ಪ್ರತಿಷ್ಠಿತ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದರು. ಅಂದಹಾಗೆ ಲಿಸಾ ಅವರಿಗೆ ಈಗ 45 ವರ್ಷ ವಯಸ್ಸು. 

See also  ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ ಎಂದ ಅಣ್ಣಾಮಲೈ..! ಉಡುಪಿಗೆ ಬಂದಿದ್ದ ವೇಳೆ ಹೇಳಿಕೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget