ಕ್ರೀಡೆ/ಸಿನಿಮಾ

ರಾಯಲ್ಸ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್ ಗೆಲುವು

126
Spread the love

ಮುಂಬೈ: ದಿನೇಶ್ ಕಾರ್ತಿಕ್ (ಅಜೇಯ 44 ರನ್, 23 ಎಸೆತ) ಮತ್ತು ಶಹಬಾಜ್ ಅಹಮದ್ (45 ರನ್, 26 ಎಸೆತ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ರಾಜಸ್ಥಾನ ರಾಯಲ್ಸ್ ನೀಡಿದ್ದ 170 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ 19.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ಜೋಸ್ ಬಟ್ಲರ್ ಸಿಡಿಸಿದ ಅರ್ಧಶತಕ ಮತ್ತು ಶಿಮ್ರೋನ್‌ ಹೆಟ್ಮೆಯರ್ ಅವರ ಬಿರುಸಿನ ಬ್ಯಾಟಿಂಗ್‌ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಡೆಗೆ 170 ರನ್‌ ಗುರಿ ನೀಡಿತ್ತು.

See also  ಅಪ್ಪು ಅಗಲಿಕೆಗೆ ಇಂದಿಗೆ ಭರ್ತಿ 3 ವರ್ಷ, ಅಪ್ಪು ಸಮಾಧಿ ದರ್ಶನಕ್ಕೆ ಬರುವ ಅಭಿಮಾನಿಗಳಿಗಾಗಿ ಅನ್ನದಾನ
  Ad Widget   Ad Widget   Ad Widget