Latestಕ್ರೈಂರಾಜ್ಯವೈರಲ್ ನ್ಯೂಸ್

ಕ್ರಿಕೆಟ್‌ ಮೈದಾನದಲ್ಲಿ ಸ್ನೇಹಿತರ ನಡುವೆ ಜಗಳ..! ಓರ್ವನ ಹತ್ಯೆ, ಇಬ್ಬರು ಪೊಲೀಸ್ ವಶಕ್ಕೆ..!

578

ನ್ಯೂಸ್ ನಾಟೌಟ್: ಕ್ರಿಕೆಟ್‌ ವಿಚಾರವಾಗಿ ಸ್ನೇಹಿತರ ಮಧ್ಯೆ ಜಗಳವಾಗಿ ಓರ್ವ ಯುವಕನನ್ನ ಹತ್ಯೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಮತ್ತೋರ್ವನಿಗೆ ಗಾಯವಾಗಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಿವಮೊಗ್ಗದ ಭದ್ರಾವತಿ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ(ಮೇ.5) ಘಟನೆ ಸಂಭವಿಸಿದೆ. ಅರುಣ್‌ (23) ಕೊಲೆಯಾದಾತ ಎಂದು ಗುರುತಿಸಲಾಗಿದೆ. ಸಂಜಯ್‌ ಗಾಯಗೊಂಡಿರುವ ಯುವಕ.

ಸೋಮವಾರ ಸಂಜೆ ಕ್ರಿಕೆಟ್‌ ಆಡಿದ್ದರು. ರಾತ್ರಿ ಮದ್ಯ ಸೇವಿಸುವಾಗ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ಸಂದರ್ಭ ಹತ್ಯೆಯಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪಾನಮತ್ತರಾಗಿರುವ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಮೇಲೆ ರೌಡಿಶೀಟರ್ ಓಪನ್ ಮಾಡಿದ್ದೇ ಬಿಜೆಪಿ ಎಂದ ದಿನೇಶ್ ಗುಂಡೂರಾವ್..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ಬಯಲು ಶೌಚಕ್ಕೆ ಕುಳಿತಿದ್ದ ವೃದ್ಧನ ಮರ್ಮಾಂಗವನ್ನೇ ಕಚ್ಚಿ ಎಳೆದೊಯ್ದ ಮೊಸಳೆ..! ವ್ಯಕ್ತಿಯ ಕಿರುಚಾಟ ಕೇಳಿ ಓಡಿ ಬಂದ ಗ್ರಾಮಸ್ಥರು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget