ಕ್ರೀಡೆದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಪಂದ್ಯ ಸೋತದ್ದಕ್ಕಾಗಿ ಕೆ,ಎಲ್ ರಾಹುಲ್ ಗೆ ಬೈದ ತಂಡದ ಫ್ರಾಂಚೈಸಿ ಮಾಲೀಕ..! ವಿಡಿಯೋ ವೈರಲ್, ಅಭಿಮಾನಿಗಳಿಂದ ಆಕ್ರೋಶ

ನ್ಯೂಸ್ ನಾಟೌಟ್: ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯಾಂಕ ನಾಯಕ ಕೆ.ಎಲ್. ರಾಹುಲ್ ಗೆ ಛೀಮಾರಿ ಹಾಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ, ಬುಧವಾರ(ಮೇ.8) ರಂದು ನಡೆದ ಪಂದ್ಯದ ವೇಳೆಯ ಈ ವಿಡಿಯೋಗೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಎಸ್ ಆರ್ ಎಚ್ ಆರಂಭಿಕ ಬ್ಯಾಟರ್ ಗಳಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್, ನಂಬಲಸಾಧ್ಯ ವೇಗದಲ್ಲಿ ಎಲ್ ಎಸ್ ಜಿ ನೀಡಿದ ಗುರಿಯನ್ನು ತಲುಪಿ 10 ವಿಕೆಟ್ ಗಳ ಭರ್ಜರಿ ಜಯಕ್ಕೆ ಕಾರಣರಾಗಿದ್ದರು. ಎಲ್ ಎಸ್ ಜಿ ಡಗೌಟ್ ಬಳಿ ರಾಹುಲ್ ಜತೆ ಗೊಯಾಂಕ ಮಾತನಾಡುವ ವೇಳೆ ಕೋಪ ವ್ಯಕ್ತಪಡಿಸುತ್ತಿರುವುದು ಕಾಣಿಸುತ್ತಿದ್ದು, ಅಭಿಮಾನಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗೊಯಾಂಕ ಅವರು ರಾಹುಲ್ ಜತೆ ಕಟುವಾಗಿ ಮಾತನಾಡುತ್ತಿರುವ ದೃಶ್ಯ ಪ್ರಸಾರವಾಗಿದೆ.

ವೀಕ್ಷಕ ವಿವರಣೆಗಾರರು ಇದನ್ನು “ನೀವು ಈ ಮಾತುಕತೆಯುನ್ನು ಮುಚ್ಚಿದ ಕೊಠಡಿಯಲ್ಲಿ ಮಾಡಬೇಕು. ಹಲವು ಕ್ಯಾಮೆರಾಗಳಿರುವಲ್ಲಿ ಮಾಡಿದರೆ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದಿದ್ದಾರೆ. ರಾಹುಲ್ ಪತ್ರಿಕಾಗೋಷ್ಠಿಗೂ ಹೋಗುವುದಿಲ್ಲ. ಇಲ್ಲಿ ತಾಳ್ಮೆ ಕಳೆದುಕೊಳ್ಳದೇ ರಾಹುಲ್ ಒಳ್ಳೆಯ ಕೆಲಸ ಮಾಡಿದ್ದಾರೆ” ಎಂದು ವಿವರಿಸಿದ್ದರು.

Related posts

ಟಿವಿ ನಿರೂಪಕನನ್ನು ಅಪಹರಿಸಿದ್ದೇಕೆ ಆ ಮಹಿಳೆ..? ಇಲ್ಲಿದೆ ವಿಚಿತ್ರ ಲವ್ವಿ-ಡವ್ವಿ ಸ್ಟೋರಿ..!

ನಾನು ಅಲ್ಲು ಅರ್ಜುನ್‌ ನ ಅಪ್ಪಟ ಅಭಿಮಾನಿ ಎಂದ ಅಮಿತಾಬ್‌ ಬಚ್ಚನ್‌, ಅಲ್ಲು ಅರ್ಜುನ್‌ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡ ಬಾಲಿವುಡ್ ನಟ

ಪ್ರಲ್ಹಾದ ಜೋಶಿ ವಿರುದ್ಧ ಸ್ಪರ್ಧೆಗಿಳಿದ ದಿಂಗಾಲೇಶ್ವರ ಶ್ರೀ..! ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಮೀಜಿ ಕಣಕ್ಕೆ