ಕ್ರೈಂ

ಸುಬ್ರಹ್ಮಣ್ಯ: ಗೋವು ಕದಿಯಲು ದುಬಾರಿ ಕಾರಿನಲ್ಲಿ ಬಂದ ಕಳ್ಳರು..!

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದೇವಾಲಯದ ಪಾರ್ಕಿಂಗ್ ಜಾಗದ ಬಳಿ ಆಂಜನೇಯ  ಗುಡಿಯ ಹಿಂಭಾಗದಿಂದ ದನ ಕದಿಯಲು ಪ್ರಯತ್ನ ಪಟ್ಟ ಘಟನೆ ಮಾ.23 ರ ರಾತ್ರಿ ನಡೆದಿದೆ.

ಕಾರಿನಲ್ಲಿ ಬಂದ ಕಳ್ಳರು ಪಾರ್ಕಿಂಗ್ ಸಮೀಪ ಮೂರು ಜನರ ತಂಡವೊಂದು ಜಾವ 3 ಗಂಟೆ ಸುಮಾರಿಗೆ ಗೋವೊಂದನ್ನು ಹಿಡಿದು ಕಾರಿಗೆ ತುಂಬಿಸಲು ಯತ್ನಿಸಿರುವುದು, ಗೋವು ತಪ್ಪಿಸಿಕೊಳ್ಳುವುದು ಇತ್ಯಾದಿ ದೃಶ್ಯಗಳು ಆಂಜನೇಯ ದೇವಸ್ಥಾನದ ಬಳಿಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೇ ದಿನ ರಾತ್ರಿ ಗುತ್ತಿಗಾರಿನ ಹಾಲೆಮಜಲು ಮತ್ತು ಎಡಮಂಗಲದಲ್ಲಿ ಕಳ್ಳತನ ನಡೆದಿದ್ದು, ಒಂದಕ್ಕೊಂದು ಸಂಬಂಧವಿದೆಯೋ ಎಂಬುದನ್ನು ಪೊಲೀಸರು ಸಮಗ್ರ ತನಿಖೆ ನಡೆಸಿದರೆ ಗೊತ್ತಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

12ನೇ ತರಗತಿ ಕಲಿತವನಿಂದ ದಿನಕ್ಕೆ 5 ಕೋಟಿಗೂ ಹೆಚ್ಚು ವ್ಯವಹಾರ..! ಈತನ ತಾಂತ್ರಿಕ ಜ್ಞಾನಕ್ಕೆ ಬೆಚ್ಚಿಬಿದ್ದ ಪೊಲೀಸರು!

ಅಮಿತ್‌ ಶಾ ಇದ್ದ ರಥಕ್ಕೆ ಕರೆಂಟ್‌ ಶಾಕ್‌ ಹೊಡೆದದ್ದೇಗೆ..? ತನಿಖೆಗೆ ಆದೇಶಿಸಿದ ಸಿಎಂ! ಮುಂದೇನಾಯ್ತು..?

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ತೇಲಿ ಬಂದ ಅಪರಿಚಿತ ಮಹಿಳೆಯ ಮೃತದೇಹ..! ಸುಮಾರು 15 ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ..!