ಕ್ರೈಂ

ಅಕ್ರಮ ಗೋಮಾಂಸ ಸಾಗಾಟ, 160 ಕೆಜಿ ಗೋಮಾಂಸ, ಕಾರು ಸಹಿತ ನಾಲ್ವರು ಆರೋಪಿಗಳ ಬಂಧನ…!!

861

ಉಳ್ಳಾಲ: ಕೇರಳದ ಕಾಸರಗೋಡು ಕಡೆಯಿಂದ ಉಳ್ಳಾಲಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಚೆಂಬುಗುಡ್ಡೆಯ ನಿವಾಸಿ ಹುಸೇನ್, ಕೋಡಿ ಉಳ್ಳಾಲ ನಿವಾಸಿಗಳಾದ ಮೊಹಮ್ಮದ್ ಅಮೀನ್, ಸುಹೈಬ್ ಅಖ್ತರ್ ಮತ್ತು ಮುಹಮ್ಮದ್ ಮುಜಾಂಬಿಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕಾಸರಗೋಡಿನಿಂದ ಉಳ್ಳಾಲಕ್ಕೆ KA 19 MD 1861 ಮಾರುತಿ ಈಕೊ ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದರು. ಬಂದ್ಯೋಡು ಎಂಬಲ್ಲಿ ಮಹಮ್ಮದ್ ಎಂಬುವರಿಂದ ಹಸುಗಳನ್ನು ಖರೀದಿಸಿ ಅವರ ಮನೆಯಲ್ಲಿಯೇ ಪ್ರಾಣಿಗಳನ್ನು ಕೊಂದು  ಮಾಂಸವನ್ನು ಉಳ್ಳಾಲದ ಯುಸಿ ಇಬ್ರಾಹಿಂ ಕೋಡಿ ಎಂಬಾತನ ಕೋಡಿ ಮತ್ತು ಮುಕ್ಕಚ್ಚೇರಿಯ ಬೀಫ್ ಸ್ಟಾಲ್ ನಲ್ಲಿ ಮಾರಾಟ ಮಾಡಲು ಯೋಜಿಸಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.

See also  ತಾಯಿಯೇ ಮಗನ ಉಸಿರು ನಿಲ್ಲಿಸಿದ ಪ್ರಕರಣ;ಕಿತ್ತಾಡಿಕೊಂಡ ಗಂಡ-ಹೆಂಡ್ತಿ ಕಂಡು ಪೊಲೀಸರಿಗೆ ಶಾಕ್..!ವಿಚಾರಣೆ ಸಂದರ್ಭ ದಂಪತಿ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget