Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಗೋವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪಿಗಳು ಅರೆಸ್ಟ್..! ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲು..!

1k

ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಇಂದೋರ್‌ ನಲ್ಲಿ ಗೋವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯ್ ಅಹಿರ್ವಾರ್, ದ್ವಾರಕಾ ಗೋಸ್ವಾಮಿ ಬಂಧಿತ ಆರೋಪಿಗಳು ಎಂದು ವರದಿ ತಿಳಿಸಿದೆ. ಇಬ್ಬರು ಆರೋಪಿಗಳ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ- 1960 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಬ್ಬರು ಆರೋಪಿಗಳು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ. ಮೊದಲ ಘಟನೆ ಇಂದೋರ್‌ ನಲ್ಲಿ ನಡೆದಿದೆ. ಕೃತ್ಯದ ವೀಡಿಯೊ ವೈರಲ್ ಆಗುತ್ತಿದ್ದಂತೆ ಹಿಂದು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ವೀಡಿಯೊ ಪರಿಶೀಲನೆ ಬಳಿಕ ಪೊಲೀಸರು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯ್‌ ನನ್ನು ಬಂಧಿಸಿದರು.

ಇಂದೋರ್‌ ನಿಂದ 200ಕಿಮೀ ದೂರದಲ್ಲಿರುವ ಮಂದಸೌರ್ ಜಿಲ್ಲೆಯ ಅಫ್ಝಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಮತ್ತೊಂದು ಘಟನೆ ವರದಿಯಾಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಮಂದಸೌರ್ ನಿವಾಸಿ ದ್ವಾರಕಾ ಗೋಸ್ವಾಮಿಯನ್ನು ಬಂಧಿಸಲಾಗಿದೆ.  

 

See also  ಗಗನಯಾತ್ರಿ ಸುನಿತಾ ವಿಲಿಯಮ್ಸ್ ಇನ್ನು ಭೂಮಿಗೆ ಮರಳುವುದು 2025ಕ್ಕೆ..! ನಾಸಾ ಈ ಬಗ್ಗೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget