ಕರಾವಳಿಕಾಸರಗೋಡುಕ್ರೈಂ

ಗೂನಡ್ಕ: ಹಟ್ಟಿಯಿಂದ ತುಂಬಿದ ಗಬ್ಬದ ಹಸುಗಳನ್ನು ಕದ್ದಿದ್ದ ಗೋ ಕಳ್ಳರು ಕೇರಳದಲ್ಲಿ ಅರೆಸ್ಟ್..! ಸುಳ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ

235

ನ್ಯೂಸ್ ನಾಟೌಟ್: ಹಟ್ಟಿಯಿಂದ ತುಂಬಿದ ಗಬ್ಬದ ಎರಡು ಹಸುಗಳನ್ನು ಕದ್ದು ಪರಾರಿಯಾಗಿದ್ದಕುಖ್ಯಾತ ಗೋ ಕಳ್ಳರನ್ನು ಸುಳ್ಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಬಂಧಿತ ವ್ಯಕ್ತಿಗಳಲ್ಲಿ ಓರ್ವ ಮರ್ಕಂಜದ ವ್ಯಕ್ತಿ ಮತ್ತೋರ್ವ ಕೇರಳದವ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಸಿಸಿ ಕ್ಯಾಮೆರಾಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಸೆಪ್ಟೆಂಬರ್ 13ರಂದು ತಡರಾತ್ರಿ ಎರಡು ಗಂಟೆ ಹೊತ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕದ ವರದರಾಜ್ ಸಂಕೇಶ್ವರ್ ಮನೆಯ ಹಟ್ಟಿಯಲ್ಲಿದ್ದ ಎರಡು ಹಸುಗಳನ್ನು ಪಿಕಪ್ ಗೆ ತುಂಬಿ ಕದ್ದೊಯ್ಯಲಾಗಿತ್ತು. ಎರಡು ಹಸುಗಳು ಕೂಡ ಗಬ್ಬದವು ಆಗಿದ್ದವು. ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. ಪೊಲೀಸರು ತೀವ್ರ ತನಿಖೆ ನಡೆಸಿದ ಬಳಿಕ ಇದೀಗ ಗೋ ಕಳ್ಳರ ಪತ್ತೆಯಾಗಿದೆ. ಎರಡು ದನಗಳನ್ನು ಅವರು ಕಸಾಯಿ ಖಾನೆಗೆ ನೀಡಿದ್ದಾರೆ ಅನ್ನುವಂತಹ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆದ ಬಳಿಕ ಇನ್ನಷ್ಟು ವಿಚಾರಗಳು ತಿಳಿದು ಬರಲಿದೆ.

ಮರ್ಕಂಜದ ವ್ಯಕ್ತಿ ಇನ್ನೊಬ್ಬರ ಹಟ್ಟಿಯಲ್ಲಿರುವ ಗೋವುಗಳನ್ನು ಕದಿಯುವುದರಲ್ಲಿ ಎಕ್ಸ್ ಪರ್ಟ್ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಊರಿನಲ್ಲಿ ಹಲವು ದೂರುಗಳು ಕೂಡ ಕೇಳಿ ಬಂದಿದ್ದು ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಈ ಹಿಂದೆಯೂ ಹಲವಾರು ಗೋವುಗಳನ್ನು ಇದೇ ರೀತಿಯಲ್ಲಿ ಕದ್ದು ಸಾಗಿಸುತ್ತಿದ್ದ ಎಂದೂ ಹೇಳಲಾಗಿದೆ. ಕಲ್ಲುಗುಂಡಿ, ಅರಂತೋಡು, ಚೆಂಬು ಪರಿಸರದಿಂದ ಹೆಚ್ಚಿನ ದನಗಳು ಕಾಣೆಯಾಗಿರುವುದರ ಹಿಂದೆ ಈತನ ಕೈವಾಡ ಇದೆ ಅನ್ನುವ ಶಂಕೆ ವ್ಯಕ್ತವಾಗಿದ್ದು ಹೆಚ್ಚಿನ ತನಿಖೆ ನಡೆಯಬೇಕೆಂದು ಗೋ ರಕ್ಷಕರು ಒತ್ತಾಯಿಸಿದ್ದಾರೆ.

See also  ಮಂಗಳೂರು: ಕೇರಳದಿಂದ ಕರ್ನಾಟಕದ ಕಡೆಗೆ ಅಕ್ರಮ ಜಾನುವಾರು ಸಾಗಾಟ..! ಕಂಟೈನರ್ ವಾಹನ ಪೊಲೀಸ್ ವಶಕ್ಕೆ, 24 ಗೋವುಗಳ ರಕ್ಷಣೆ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget