ಕ್ರೈಂಪುತ್ತೂರುವೈರಲ್ ನ್ಯೂಸ್

ವಿಟ್ಲ: ಗೋವಿನ ಕಿವಿ, ಚರ್ಮ ಕತ್ತರಿಸಿ ರಸ್ತೆಗೆಸೆದು ವಿಕೃತಿ ಮೆರೆದ ದುಷ್ಕರ್ಮಿಗಳು..! ಸ್ಥಳದಲ್ಲಿ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರಿಂದ ತೀವ್ರ ಖಂಡನೆ

ನ್ಯೂಸ್ ನಾಟೌಟ್ : ತಾಯಿ ಎಂದು ಪೂಜಿಸುವ ಗೋವುಗಳ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಅನ್ನುವ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಗೋವಿನ ಕಿವಿ ಮತ್ತು ಚರ್ಚವನ್ನು ಕತ್ತರಿಸಿ ರಸ್ತೆಗೆ ಎಸೆದು ವಿಕೃತಿ ಮೆರೆದಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಕೊಟ್ಟಾರಿ ಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಇಲ್ಲಿನ ವೀರಕಂಭ ಗ್ರಾಮದ ಕೊಟ್ಟಾರಿ ಕಟ್ಟೆ ಬಸ್‌ ನಿಲ್ದಾಣದ ಬಳಿ ಇಂದು ಮುಂಜಾನೆ ಕತ್ತರಿಸಿದ ದನದ ಕಿವಿ ಮತ್ತು ಚರ್ಮ ಪತ್ತೆಯಾಗಿದೆ. ಸ್ಥಳೀಯರು ವಿಟ್ಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದರು. ಈ ಕೃತ್ಯದ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ.

ನಾಡಹಬ್ಬ ದಸರಾ ಮತ್ತು ನವರಾತ್ರಿ ಸಂದರ್ಭದಲ್ಲಿ ದುಷ್ಕರ್ಮಿಗಳು ಕೋಮು ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದುಬಜರಂಗದಳ ಕೆಲಿಂಜ ಘಟಕ ಆರೋಪಿಸಿದೆ.

Related posts

ಯಕ್ಷ ಲೋಕದ ಗಾನ ಗಂಧರ್ವ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

ತಂಗಿ ಲಿವರ್‌ ದಾನ ಮಾಡಿದರೂ ಅಕ್ಕ ಉಳಿಯಲಿಲ್ಲ..!ಲಿವರ್‌ ದಾನ ಮಾಡಿದ ತಂಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಶಿವಮೊಗ್ಗದಿಂದ ಮಂಗಳೂರಿಗೆ ಗೋಸಾಗಾಟಕ್ಕೆ ಯತ್ನ , ಬಜರಂಗದಳದಿಂದ ದಾಳಿ, 30ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ