ಕರಾವಳಿ

ಹೂವಿನ ಗಿಡ ತಿಂದಿದ್ದಕ್ಕೆ ಗೋಮಾತೆಯ ಕಣ್ಣನ್ನೇ ಕಿತ್ತ ರಾಕ್ಷಸ

ನ್ಯೂಸ್ ನಾಟೌಟ್ :  ಹಿಂದೂ ಸಂಪ್ರದಾಯದ ಪ್ರಕಾರ ಗೋವುಗಳನ್ನೇ ಸಾಕ್ಷಾತ್ ಭಗವಂತನ ಸ್ವರೂಪವಾಗಿ ಪೂಜಿಸಲಾಗುತ್ತದೆ. ಅಂತಹ ಗೋಮಾತೆಯನ್ನು ಇಲ್ಲೊಬ್ಬ ರಾಕ್ಷಸ ಕೇವಲ ಹೂವಿನ ಗಿಡ ತಿಂದಿತು ಅನ್ನುವ ಕಾರಣಕ್ಕೆ ಕಣ್ಣು ಮತ್ತು ಕೊಂಬನ್ನು ಕತ್ತಿಯಿಂದ ಕಡಿದು ರಾಕ್ಷಸೀ ಪ್ರವೃತ್ತಿ ತೋರಿದ್ದಾನೆ.

ಮೂಡಬಿದಿರೆಯ ಪಣಪಿಲ ಗ್ರಾಮದ  ನಿವಾಸಿ ಅಶೋಕ್  ಎಂಬವರು ಹಸುವನ್ನು ಮೇಯಲು ಬಿಟ್ಟಿದ್ದು, ದನವು ಸ್ಥಳೀಯ ಹೆನ್ರಿ  ಮನೆಯ ಗಿಡಗಳನ್ನು  ತಿಂದು ಹಾಳುಮಾಡಿದೆ ಸಿಟ್ಟಿಗೆದ್ದು ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಅಶೋಕ ಅವರು  ಹಿಂದೂ ಜಾಗರಣ ವೇದಿಕೆ ಮೂಡಬಿದಿರೆ ಸಹಕಾರದಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಹಿಂಸಾಚಾರ ಕೃತ್ಯಕ್ಕೆ ಆರೋಪಿಯನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Related posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ.7ರಂದು ಬಿಸಿಯೂಟ ಸ್ಥಗಿತ..!ಕಾರಣವೇನು?

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ನಟಿ ಪೂಜಾ ಗಾಂಧಿ ದಂಪತಿ

ಸುಳ್ಯ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ