ನ್ಯೂಸ್ ನಾಟೌಟ್: ರಣ ಭಯಂಕರ ಕಾಡು ಪ್ರಾಣಿಗಳಲ್ಲಿ ಹುಲಿ ಕೂಡ ಒಂದು. ಎಂತಹ ದೈತ್ಯ ಪ್ರಾಣಿಯನ್ನು ಕೂಡ ಭೇಟೆಯಾಡುವ ಸಾಮರ್ಥ ಹುಲಿಗಿದೆ. ಅಂತಹ ಹುಲಿಯನ್ನು ಹಸುಗಳೇ ಸೇರಿಕೊಂಡು ಹೆದರಿ ಓಡಿಸಿದ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಸುವಿನ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ಎಲ್ಲಾ ಹಸುಗಳು ಒಗ್ಗೂಡಿ ಹೆದರಿ ಓಡಿಸಿರುವ ಅಪರೂಪದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಭೋಪಾಲ್ ನ ಕೆರ್ವಾದಲ್ಲಿನ ಫಾರ್ಮ್ ನಲ್ಲಿ ಈ ಘಟನೆ ನಡೆದಿದ್ದು, ಇಡೀ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಇದೇ ಭಾನುವಾರ ರಾತ್ರಿ ನಡೆದಿದ್ದು, ಅಗು ಹೇಗೋ ಫಾರ್ಮ್ ಹೌಸ್ ನ ಕಾಂಪೌಂಡ್ ಒಳಗೆ ಪ್ರವೇಶ ಮಾಡಿರುವ ಹುಲಿ, ಅಲ್ಲಿಯೇ ಮೇಯುತ್ತಿದ್ದ ಹಸುಗಳ ಗುಂಪಿನತ್ತ ಧಾವಿಸಿದೆ. ಈ ವೇಳೆ ಅಲ್ಲಿಯೇ ಕುಳಿತು ಹಲ್ಲು ಮೇಯುತ್ತಿದ್ದ ಒಂಟಿ ಹಸವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಅದರ ಕುತ್ತಿಗೆ ಹಿಡಿದಿದೆ.
ಹಸುವಿನ ಚೀರಾಟ ಕೇಳುತ್ತಲೇ ಅಲ್ಲಿಯೇ ಇದ್ದ ಇತರೆ ಹಸುಗಳೆಲ್ಲಾ ಒಗ್ಗೂಡಿ ಹುಲಿಯತ್ತ ಧಾವಿಸಿದೆ. ಹಸುಗಳ ಗುಂಪು ಮತ್ತು ಅವುಗಳ ಕೂಗನ್ನು ಕೇಳಿ ಭಯಗೊಂಡ ಹುಲಿ ಕೊಂಚ ಹೊತ್ತು ಹಸುವನ್ನು ಬಿಡಲಿಲ್ಲವಾದರೂ ಈ ವೇಳೆ ಗುಂಪಿನಲ್ಲಿದ್ದ ಹಸುವೊಂದು ಹುಲಿಗೆ ತಿವಿಯಲು ಮುಂದೆ ಬಂದಿದೆ. ಆಗ ಭಯಗೊಂಡ ಹುಲಿ ಪಕ್ಕಕ್ಕೆ ಹಾರಿ ಹಸುಗಳಿಂದ ದೂರ ಹೋಗಿದೆ. ಈ ವೇಳೆ ಹುಲಿ ಬಾಯಿಗೆ ತುತ್ತಾಗ ಬೇಕಿದ್ದ ಹಸು ಕೂಡಲೇ ಮೇಲೆದ್ದು ಅಲ್ಲಿಂದ ಪಾರಾಗಿದೆ.