ಕರಾವಳಿಕ್ರೈಂವೈರಲ್ ನ್ಯೂಸ್

60ಕ್ಕೂ ಹೆಚ್ಚು ದನಗಳ ರಕ್ತ ಕೆರೆಗೆ ಹರಿಸಿದ ಕ್ರೂರಿಗಳು..! ಮಧ್ಯರಾತ್ರಿ ದಾಳಿ ಮಾಡಿದ ಪೊಲೀಸರು

243

ನ್ಯೂಸ್ ನಾಟೌಟ್: ಅಕ್ರಮ ಗೋಮಾಂಸ ಮಾರಾಟಕ್ಕಾಗಿ ಜಾನುವಾರುಗಳ ಮಾರಣಹೋಮ ನಡೆಸಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆ ಬಳಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ 60 ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಗೋವುಗಳ ಹತ್ಯೆ ವಿಚಾರ ತಿಳಿದ ಕೂಡಲೇ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಷ್ಟರಲ್ಲೇ ಕರುಗಳು ಸೇರಿದಂತೆ 60ಕ್ಕೂ ಹೆಚ್ಚು ಜಾನುವಾರಗಳನ್ನು ಹತ್ಯೆ ಮಾಡಿ ರುಂಡಗಳನ್ನು ಬೇರ್ಪಡಿಸಿ, ಕೈಕಾಲುಗಳನ್ನು ಕತ್ತರಿಸಿ, ಚರ್ಮ ಸುಲಿದು ನೇತು ಹಾಕಲಾಗಿತ್ತು.

ಸದ್ಯ, ಐದು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದು, ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಗೋವುಗಳನ್ನು ಹತ್ಯೆ ಮಾಡಿದ ನಂತರ ಗೋಹಂತಕರು ಗೋವುಗಳ ರಕ್ತವನ್ನು ಪಕ್ಕದ ಕೆರೆಗೆ ಹರಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಹಂತಕರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

See also  ಸೆಲ್ಫಿ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ..! ಈ ಬಗ್ಗೆ ಆತನ ಜೊತೆಗಿದ್ದ ಗೆಳೆಯರು ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget