ನ್ಯೂಸ್ ನಾಟೌಟ್: ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಮನಬಂದಂತೆ ಕೊಚ್ಚಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ಅರೆಕೆರೆ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದೆ. ನವೀನ್ ಎಂಬುವವರಿಗೆ ಸೇರಿದ ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದ ವೇಳೆ ದುರುಳರು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಕರು ರಕ್ತದ ಮಡುವಿಲ್ಲಿ ನರಳಾಡಿದೆ.
ಇದನ್ನೂ ಓದಿ:ಕೊಳಚೆ ಚರಂಡಿ ಸ್ವಚ್ಛಗೊಳಿಸಿದ ಶಾಲಾ ವಿದ್ಯಾರ್ಥಿಗಳು..! ಮುಖ್ಯಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ, ಇಲ್ಲಿದೆ ವಿಡಿಯೋ
ದುಷ್ಕರ್ಮಿಗಳ ಕೃತ್ಯದಿಂದ ರಕ್ತದ ಮಡುವಿಲ್ಲಿ ನರಳಾಡುತ್ತಿರುವ ಕರುವಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಕ್ರೌರ್ಯ ಮರೆದಿರುವ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಮೈಸೂರಿನಲ್ಲಿ ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚು ಹೊಡೆದು ಗಾಯಗೊಳಿಸಿರುವ ಪ್ರಕರಣ ಬೆಳಗೆ ಬಂದಿತ್ತು. ಜಾನುವಾರಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇವೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದ್ದಾರೆ.