ಕರಾವಳಿ

ಅಪಘಾತಕ್ಕೀಡಾಗಿ ಮೂರು ದಿನದಿಂದ ರಸ್ತೆಯಲ್ಲೇ ಬಿದ್ದು ನರಳಾಡುತ್ತಿರುವ ಗೋಮಾತೆ..!

ನ್ಯೂಸ್ ನಾಟೌಟ್ : ವಾಹನಗಳ ಸಂತೆಯಲ್ಲಿ ರಸ್ತೆಯಲ್ಲಿ ಮನುಷ್ಯರು ಓಡಾಡುವುದೇ ಕಷ್ಟ. ಇನ್ನೂ ಮೂಕ ಪ್ರಾಣಿಗಳ ಪರಿಸ್ಥಿತಿ ಯಾರಿಗೂ ಬೇಡ.

ಹೌದು, ರಸ್ತೆ ದಾಟಲು ಯತ್ನಿಸುತ್ತಿದ್ದ ಹಸುವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಸೇರುವ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ಹಸು ದೇಹದ ಸ್ವಾದೀನ ಕಳೆದುಕೊಂಡು ಚರಂಡಿಯಲ್ಲಿ ನರಳುತ್ತಾ ಬಿದ್ದಿದೆ.

ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದರೂ ಜೀವನ್ಮರಣ ಸ್ಥಿತಿಯಲ್ಲಿ ಬಿದ್ದಿರುವ ಹಸುವಿನ ಹತ್ತಿರ ಯಾರೂ ಸುಳಿಯದಿರುವುದು ವಿಪರ್ಯಾಸ.  ಸದ್ಯ ಹಸು ಅದೇ ಸ್ಥಳದಲ್ಲಿ ನೋವಿನಿಂದ ನರಳುತ್ತಾ ಬಿದ್ದಿದೆ. ಇದನ್ನು ನೋಡಿದರೆ ಎಂತಹವರ ಕಲ್ಲು ಹೃದಯವೂ ಕರಗುತ್ತದೆ. ಆದಷ್ಟು ಬೇಗ ಹಸುವಿನ ರಕ್ಷಣೆಗೆ ಸಂಬಂಧಪಟ್ಟವರು ಮುಂದಾಗಲಿ.

Related posts

ನನ್ನ ಮದುವೆ ಶೀಘ್ರದಲ್ಲೇ ಇದೆ,ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ-ನಟ ರಕ್ಷಿತ್ ಶೆಟ್ಟಿ;ಸಿಂಪಲ್ ಸ್ಟಾರ್ ಮದುವೆಯಾಗುತ್ತಿರೋ ಆ ‘ಲಕ್ಕಿ ಗರ್ಲ್’ ಯಾರು ಗೊತ್ತಾ?

ಕೊನೆಗೂ ಸಂಪಾಜೆ ಹೊಳೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ಹವಾಮಾನ ಇಲಾಖೆ ನೀಡಿದ ಮಳೆ, ಗಾಳಿ ಆತಂಕದ ನಡುವೆಯೇ ಪೂರ್ಣಗೊಳ್ಳುವುದೇ ಹೂಳೆತ್ತುವ ಕೆಲಸ?

ಕೇವಲ 50 ರೂ.ಗೆ  1 ಕೆ.ಜಿ ಬಂಗುಡೆ, ಮುಗಿಬಿದ್ದ ಜನ, ನಿಮಗೂ ಬೇಕಾ?