ಕ್ರೈಂಜೀವನ ಶೈಲಿ/ಆರೋಗ್ಯಡಾಕ್ಟರ್ಸ್ ಕಾರ್ನರ್/ Doctor's Cornerದೇಶ-ಪ್ರಪಂಚದೇಶ-ವಿದೇಶಮಹಿಳೆ-ಆರೋಗ್ಯ

ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಹೆಚ್ಚಾಗುತ್ತಿದೆ ಆತಂಕ..! ಕೋರ್ಟ್ ಮುಂದೆ ಸತ್ಯ ಒಪ್ಪಿಕೊಂಡ ಸಂಸ್ಥೆ..!ವೈದ್ಯರು ಈ ಬಗ್ಗೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಕೋವಿಡ್-19 ನಿಯಂತ್ರಣಕ್ಕಾಗಿ ಪಡೆದುಕೊಂಡವರು ಕೋವಿಶೀಲ್ಡ್‌ ಲಸಿಕೆ ಪಡೆದವರು ಥ್ರೊಂಬೋಸಿಸ್‌ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸುದ್ದಿಯು ಲಸಿಕೆ ಪಡೆದವರಲ್ಲಿ ಆತಂಕಕ್ಕೆ ಕಾರಣವಾಗಿದೆ. ವೈದ್ಯರ ಪ್ರಕಾರ, ‘ಲಸಿಕೆ ತೆಗೆದುಕೊಂಡ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಪ್ಯಾನಿಕ್ ರಿಯಾಕ್ಷನ್ ಅಗತ್ಯವಿಲ್ಲ, ಆದರೆ ಸಿಂಡ್ರೋಮ್‌ಗೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ಜಾಗರೂಕರಾಗಿರಿ’ ಎಂದಿದ್ದಾರೆ.

ನಿರಂತರವಾದ ರೋಗಿಯ ಮೇಲ್ವಿಚಾರಣೆಯಿಂದ ಸರಿಯಾದ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯಿಂದ ರೋಗಿಯನ್ನು ಬದುಕುಳಿಸಬಹುದಾಗಿದೆ. ಲಸಿಕೆ ಪಡೆದವರಲ್ಲಿ ಹೆಚ್ಚಾಗಿ ಸಣ್ಣ ವಯಸ್ಸಿನವರಲ್ಲಿ ಹಾಗೂ ಮೊದಲ ಡೋಸ್ ಸ್ವೀಕರಿಸುವವರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕೆಲವೊಮ್ಮೆ ರಕ್ತಸ್ರಾವದಿಂದ ಕಾಣಿಸಿಕೊಳ್ಳಬಹುದು’ ಎಂದಿದ್ದಾರೆ. ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ದೇಹದಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯನ್ನು ಉಂಟು ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯ ಪರಿಣಾಮವಾಗಿ ಪಾರ್ಶ್ವವಾಯು, ಹೃದಯಘಾತವಾಗುವ ಸಾಧ್ಯತೆಯು ಅಧಿಕವಾಗಿದೆ. ಅದಲ್ಲದೇ ಪ್ಲೇಟ್​ಲೆಟ್​ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ಕೋವಿಡ್‌ ನಿಯಂತ್ರಣಕ್ಕಾಗಿ ತಾನು ಅಭಿವೃದ್ಧಿಪಡಿಸಿದ್ದ ‘ಕೋವಿಶೀಲ್ಡ್‌’ ಲಸಿಕೆಯಿಂದ ಮಾರಣಾಂತಿಕ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಸ್ಟ್ರಾಜೆನೆಕಾ ಕಂಪನಿ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಈ ಲಸಿಕೆಯ ಅಡ್ಡಪರಿಣಾಮಕ್ಕೆ ಒಳಗಾದವರು ಹೂಡಿದ್ದ ಮೊಕದ್ದಮೆಯ ವಿಚಾರಣೆಯ ಭಾಗವಾಗಿ ಕಂಪನಿಯು ಲಂಡನ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ಇದೆ ಎನ್ನಲಾಗಿದೆ.

Related posts

18 ವರ್ಷಗಳ ನಂತರ ರಾಹು, ಶುಕ್ರ ಮೈತ್ರಿಯಿಂದ ಈ 3 ರಾಶಿಯವರಿಗೆ ತುಂಬಾ ಒಳ್ಳೆಯದಾಗಲಿದೆಯಂತೆ, ಏನು ಹೇಳುತ್ತೆ ನಿಮ್ ಭವಿಷ್ಯ..?

ಸೇನಾ ಡ್ರೋನ್‌ ದಾಳಿ ಗುರಿ ತಪ್ಪಿದ್ದೇಗೆ..? ತನ್ನದೇ ನೆಲದ 85 ಮಂದಿ ನಾಗರಿಕರ ದುರಂತ ಅಂತ್ಯವಾದದ್ದೆಲ್ಲಿ..?

ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ..! ಒಂದು ಮಗು ಮತ್ತು ತಂದೆಯ ಮೃತದೇಹ ಪತ್ತೆ..!