ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹೆರಿಗೆ ರಜೆ ಮುಗಿಸಿ ಬಂದ ಆಕೆ ಮತ್ತೆ ಗರ್ಭಿಣಿ..! ಕೆಲಸದಿಂದ ವಜಾಗೊಳಿಸಿದ ಕಂಪನಿಗೆ ಕೋರ್ಟ್ ನಿಂದ ದಂಡ..!

249

ನ್ಯೂಸ್ ನಾಟೌಟ್: ಹೆರಿಗೆ ರಜೆ ಮುಗಿಸಿ ಬಂದಿದ್ದ ಮಹಿಳಾ ಉದ್ಯೋಗಿ ಮತ್ತೆ ಗರ್ಭಿಣಿ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕಂಪನಿಯು ಆಕೆಯನ್ನು ಕೆಲಸದಿಂದ ವಜಾಗೊಳಿಸಿರುವ ಘಟನೆ ಬ್ರಿಟನ್ ​ನಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಕೋರ್ಟ್​ ಮೆಟ್ಟಿಲೇರಿದ್ದು, ಇದೀಗ ಆಕೆಗೆ ಜಯ ಸಿಕ್ಕಿದ್ದು, 31 ಲಕ್ಷ ರೂ. ಪರಿಹಾರ ನೀಡುವಂತೆ ಕಂಪನಿಗೆ ಕೋರ್ಟ್ ಸೂಚನೆ ನೀಡಿದೆ.

ಪಾಂಟಿಪ್ರಿಡ್ ​ಲ್ಲಿರುವ ಫಸ್ಟ್​ ಗ್ರೇಡ್​ ಪ್ರಾಜೆಕ್ಟ್​ನಲ್ಲಿ ಕೆಸಲ ನಿರ್ವಹಿಸುತ್ತಿದ್ದ ಮಹಿಳೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆರಿಗೆ ರಜೆ ಮುಗಿಸಿಕೊಂಡು ಬಂದ ಬಳಿಕ ತಾನು ಮತ್ತೆ ಗರ್ಭಿಣಿಯಾಗಿರುವ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೆರೆಮಿ ಮೋರ್ಗಾನ್ ಅವರಿಗೆ ತಿಳಿಸಿದ್ದಳು, ಆಗ ಆಕೆಯ ಬಾಸ್ ಆಘಾತಕ್ಕೊಳಗಾಗಿದ್ದರು.

ಆರಂಭದಲ್ಲಿ ಕೆಲಸಕ್ಕೆ ಬಂದಾಗ ಒಳ್ಳೆಯ ಪ್ರತಿಕ್ರಿಯೆ ನೀಡಿದರೂ, ಎರಡನೇ ಬಾರಿಗೆ ಆಕೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅವರ ವರ್ತನೆ ಬದಲಾಗಿತ್ತು. ಮಾರ್ಚ್ 2022 ರಲ್ಲಿ ತನ್ನ 2ನೇ ಹೆರಿಗೆ ರಜೆ ಕೊನೆಗೊಂಡಾಗ, ಕಂಪನಿಯು ಅವಳನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ನಿಕಿತಾ ಆರೋಪಿಸಿದ್ದಾರೆ.
ತನ್ನ ಎರಡನೇ ಮಗುವಿಗೆ ಎಂಟು ವಾರಗಳ ಗರ್ಭಿಣಿಯಾಗಿದ್ದಾಳೆಂದು ಬಹಿರಂಗಪಡಿಸಿದಾಗ ಆಕೆಯನ್ನು ಕಂಪನಿ ವಜಾಗೊಳಿಸಿತ್ತು. ಆಕೆ ಕೋರ್ಟ್ ಮೆಟ್ಟಿಲೇರಿದ ಮೇಲೆ ಈಗ ಆಕೆಯ ಪರ ತೀರ್ಪು ಬಂದಿದೆ.

Click

https://newsnotout.com/2024/10/baby-attacked-by-cheethah-kannada-news/
https://newsnotout.com/2024/10/kannada-news-girl-frined-nomore-misbehaviour-k/
https://newsnotout.com/2024/10/couple-mother-poisoned-child-kananda-news-s/
https://newsnotout.com/2024/10/govt-bus-collision-to-pedestrain-kannada-news-h/
https://newsnotout.com/2024/10/bengaluru-cold-drinks-kannada-news-10-crore-leater/
See also  ಗುದನಾಳದಲ್ಲಿ 403 ಗ್ರಾಂ ಚಿನ್ನ ಸಾಗಿಸಿದ ಪ್ರಯಾಣಿಕ...!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget