ಕ್ರೈಂ

ಪುತ್ತೂರು: ಊಟ ಮಾಡಿ ಮಲಗಿದ್ದ ದಂಪತಿ ತಡ ರಾತ್ರಿಯಲ್ಲಿ ನೇಣಿಗೆ ಶರಣು

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಾದೆಕರ್ಯದಲ್ಲಿ ಕೃಷಿಕ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಸುಬ್ರಹ್ಮಣ್ಯ ಭಟ್ (84) – ಶಾರದಾ ಭಟ್ (78) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇಬ್ಬರೂ ಭಾನುವಾರ ರಾತ್ರಿ ಊಟ ಮಾಡಿ ಮನೆಯ ಕೆಳಗಿನ ಅಂತಸ್ತಿನ ಕೋಣೆಯಲ್ಲಿ ಮಲಗಿದ್ದರು. ಪುತ್ರ, ಅವರ ಪತ್ನಿ ಮತ್ತು ಮಕ್ಕಳು ಮಹಡಿಯ ಕೋಣೆಯಲ್ಲಿ ಮಲಗಿದ್ದರು. ಪುತ್ರ ಸೋಮವಾರ ಬೆಳಿಗ್ಗೆ ಎದ್ದು ನೋಡಿದಾಗ ದಂಪತಿ ಪ್ರತ್ಯೇಕ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ನೈಟಿ ಎಗರಿಸಿ ಪರಾರಿಯಾದ ಬುರ್ಖಾಧಾರಿ ಕಳ್ಳಿಯರು..!

ಮಹಾ ಕುಂಭಮೇಳದಲ್ಲಿ ಭಾರಿ ಬೆಂಕಿ ಅವಘಡ..! ಕೆಲವೇ ಕ್ಷಣಗಳಲ್ಲಿ 20-25 ಟೆಂಟ್‌ ಗಳು ಸುಟ್ಟು ಭಸ್ಮ..!

ಸರ್ಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ ನಲ್ಲಿ ನರ್ಸ್‌ ಜೊತೆ ಡಾಕ್ಟರ್ ಲವ್ವಿಡವ್ವಿ..! ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದೇನು..?