ದೇಶ-ಪ್ರಪಂಚ

ಕಟ್ಟಡದಿಂದ ಜಿಗಿದು ಉಸಿರುಚೆಲ್ಲಿದ್ದ ಅಣ್ಣ,ರಾಖಿ ಕಟ್ಟಲು ಸಹೋದರ ಬೇಕೆಂದು ಹಠ ಹಿಡಿದ ಮಗಳು: ನವಜಾತ ಶಿಶುವನ್ನೇ ಅಪಹರಿಸಿ ಮಗಳಿಗೆ ತಂದೊಪ್ಪಿಸಿದ ಪೋಷಕರು..!

ನ್ಯೂಸ್ ನಾಟೌಟ್ : ರಕ್ಷಾ ಬಂಧನ ಅನ್ನೋದು ಅಣ್ಣ-ತಂಗಿಯ ನಡುವಿನ ಬಾಂಧವ್ಯವನ್ನು ತಿಳಿಸುವ ಹಬ್ಬ.ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಸಂಕಲ್ಪ ಹೊಂದಿರುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆ ದಿನದಂದು ರಕ್ಷಾ ಬಂಧನವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಆಗಸ್ಟ್​ 30ರಂದು ರಕ್ಷಾ ಬಂಧನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ರಕ್ಷಾ ಬಂಧನದ ದಿನ ತನಗೆ ರಾಖಿ ಕಟ್ಟಲು ಸಹೋದರ ಬೇಕು ಎಂದು ಮಗಳು ಹಠ ಮಾಡಿದಳೆಂಬ ಕಾರಣಕ್ಕೆ ದಂಪತಿ ನವಜಾತ ಗಂಡು ಶಿಶುವನ್ನು ಅಪಹರಿಸಿದ ಘಟನೆ ನಡೆದಿದೆ. ಈ ಘಟನೆ ನವದೆಹಲಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಸಂಜಯ್​ ಗುಪ್ತಾ(41) ಹಾಗೂ ಅನಿತಾ ಗುಪ್ತಾ(36) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಉತ್ತರ ವಿಭಾಗದ ಡಿಸಿಪಿ ಸಾಗರ್​ ಸಿಂಗ್​ ಕಳ್ಸಿ ಸಂಜಯ್​ ಹಾಗೂ ಅನಿತಾ ದಂಪತಿಯ ಪುತ್ರ (17 ವರ್ಷ) ಕಳೆದ ವರ್ಷ ಕಟ್ಟಡದ ಮೇಲಿಂದ ಬಿದ್ದಿದ್ದ ಎನ್ನಲಾಗಿದೆ.ತಮ್ಮ ಪುತ್ರಿ ರಕ್ಷಾ ಬಂಧನದ ದಿನ ರಾಖಿ ಕಟ್ಟಲು ಸಹೋದರ ಬೇಕು ಎಂದು ಹಠ ಹಿಡಿದಿದ್ದರಿಂದ ಈ ರೀತಿ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.ಗುರುವಾರ ಬೆಳಗಿನ ಜಾವ 4:43ರ ಸುಮಾರಿಗೆ ಛಟ್ಟಾ ರೈಲ್​ ಚೌಕನ್​ ಫುಟ್​ಪಾತ್​ನಲ್ಲಿ ಮಲಗಿದ್ದ ವಿಕಲಚೇತನರೊಬ್ಬರ ಮಗುವನ್ನು ಅಪಹರಿಸಲಾಗಿದೆ ಎಂದು ಪೊಲೀಸ್​ ಕಂಟ್ರೋಲ್​ ರೂಮಿಗೆ ಕರೆ ಬಂದಿತ್ತು.

ಈ ವೇಳೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸುಮಾರು 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್​ನ ನಂಬರ್​ ಪತ್ತೆ ಹಚ್ಚಿದ್ದರು.

ಹಠ ಮಾಡಿದ್ದ ಮಗಳು:

ಬೈಕ್​ ಯಾರ ಹೆಸರಿನಲ್ಲಿದೆ ಎಂದು ಪರಿಶೀಲಿಸಿದಾಗ ಆರೋಪಿ ಸಂಜಯ್​ ಹೆಸರಿನಲ್ಲಿರುವುದು ಕಂಡು ಬಂದಿತ್ತು. ಆರೋಪಿ ಟ್ಯಾಗೋರ್​ ನಗರದ ರಘುಬೀರ್​ ಬ್ಲಾಕ್​ನಲ್ಲಿ ವಾಸವಿರುವುದು ಬೆಳಕಿಗೆ ಬಂತು. ಎಚ್ಚೆತ್ತ ಅಧಿಕಾರಿಗಳ ತಂಡ ಕೂಡಲೇ ಆರೋಪಿ ದಂಪತಿಯನ್ನು ವಶಕ್ಕೆ ಪಡೆಯಿತು ಮತ್ತು ಅಪಹರಣಕ್ಕೊಳಗಾಗಿದ್ದ ಮಗುವನ್ನು ರಕ್ಷಿಸಿ ಪಾಲಕರ ಮಡಿಲಿಗೆ ಒಪ್ಪಿಸಲಾಯಿತು.

ಕಳೆದ ವರ್ಷ ತಮ್ಮ ಮಗ ಮಹಡಿ ಮೇಲಿಂದ ಬಿದ್ದು ಉಸಿರು ಚೆಲ್ಲಿದ.ಇದರಿಂದ ತಮ್ಮ ಮಗಳು ರಾಖಿ ಕಟ್ಟಲು ಸಹೋದರ ಬೇಕು ಎಂದು ಹಠ ಹಿಡಿದಿದ್ದಾಳೆ.ಹೀಗಾಗಿ ಮಗುವನ್ನು ಅಪಹರಿಸಿದ್ದಾಗಿ ದಂಪತಿ ತಪ್ಪೊಪ್ಪಿಕೊಂಡಿದ್ದಾರೆ. ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್​ ಆಗಿರುವ ಸಂಜಯ್​ ವಿರುದ್ಧ ಮೂರು ಕ್ರಿಮಿನಲ್​ ಕೇಸ್​ಗಳ ವಿಚಾರಣೆ ನಡೆಯುತ್ತಿದೆ. ಅವರ ಪತ್ನಿ ಮೆಹಂದಿ ಆರ್ಟಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ದೆಹಲಿ ಉತ್ತರ ವಿಭಾಗದ ಡಿಸಿಪಿ ಸಾಗರ್​ ಸಿಂಗ್​ ಕಳ್ಸಿ ತಿಳಿಸಿದ್ದಾರೆ.

Related posts

ಛತ್ತಿಸ್‌ಗಡ: ಭೀಕರ ಅಪಘಾತಕ್ಕೆ 11 ಬಲಿ

ಆದಾಯ ತೆರಿಗೆ ಇಲಾಖೆಗೆ ಬೆಂಕಿ..! ಉಸಿರುಗಟ್ಟಿ ಅಧಿಕಾರಿ ಸಾವು..! ಇಲ್ಲಿದೆ ವಿಡಿಯೋ

ಖಾಸಗಿ ಉದ್ಯೋಗಗಳಲ್ಲಿ ಶೇ80 ಮೀಸಲಾತಿ: ಕೇಜ್ರಿವಾಲ್