ನ್ಯೂಸ್ ನಾಟೌಟ್ : ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯದಲ್ಲಿ ಹೆಚ್ಚಿನದ್ದು ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಕೊರೋನಾ ಬಗ್ಗೆ ಹೇಳಿರುವ ಭವಿಷ್ಯದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಹೌದು, ಬಿಎಫ್ ೭ ರೂಪಾಂತರಿ ವೈರಸ್ ಬಗ್ಗೆ ಸ್ವಾಮೀಜಿ ಏನು ಹೇಳಿದ್ದಾರೆ ಅನ್ನುವುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇವೆ ಓದಿ.
ಈ ಸಲದ ಕೊರೋನಾ ಹಾಗೆ ಬರುತ್ತದೆ ಹೀಗೆ ಹೋಗುತ್ತದೆ. ಯಾವುದೇ ಸಾವು-ನೋವು ಸಂಭವಿಸುವುದಿಲ್ಲ. ಯಾರಿಗೂ ಭಯ ಬೇಡ ಎಂದು ಕೋಡಿಮಠದ ಸ್ವಾಮೀಜಿಗಳು ತಿಳಿಸಿದ್ದಾರೆ. ಈ ನಡುವೆ ಇನ್ನೊಂದು ಗಂಭೀರವಾದ ವಿಚಾರವನ್ನು ಸ್ವಾಮೀಜಿ ತಿಳಿಸಿದ್ದು ಎಲ್ಲರ ಕಿವಿ ನೆಟ್ಟಗಾಗಿದೆ. ಈ ಪ್ರಕಾರವಾಗಿ ನೋಡುವುದಾದರೆ ‘ಒಲೆ ಹೊತ್ತಿ ಉರಿದರೆ ಅಡುಗೆಯಾಗುತ್ತದೆ. ಭೂಮಿ ಹೊತ್ತಿ ಉರಿದರೆ ಏನಾಗುತ್ತದೆ’ ಎಂಬ ಪ್ರಸಂಗ ಮುಂದಿನ ದಿನಗಳಲ್ಲಿ ನಡೆಯಲಿದೆ ಅನ್ನುವ ಎಚ್ಚರಿಕೆಯ ಮುನ್ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಂಪೂರ್ಣವಾಗಿ ವಿವರಿಸುವುದಾಗಿ ತಿಳಿಸಿದ್ದಾರೆ.