ಕರಾವಳಿ

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

ನ್ಯೂಸ್ ನಾಟೌಟ್ : ಕರೋನಾ ಇಂಜೆಕ್ಷನ್ ಪಡೆದುಕೊಂಡ ಮೇಲೆ ಕೈ ನೋವಿನಿಂದ ಕೆಲಸ ಮಾಡಲಾಗುತ್ತಿಲ್ಲ ಎಂದು ಮನನೊಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯಗೆ ಶರಣಾದ ಘಟನೆ ಕಾರ್ಕಳದ ಕೌಡೂರು ಗ್ರಾಮದ ತಡ್ಪೆದೋಟ ಮನೆಯಲ್ಲಿ ನಡೆದಿದೆ. ಪ್ರದೀಪ್ ಪೂಜಾರಿ (37 ವ) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.  

ಪ್ರದೀಪ್ ಪೂಜಾರಿ ಸುಮಾರು 10 ವರ್ಷಗಳಿಂದ ಮುಂಬೈ ಮತ್ತು ಪೂನಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಕೌಡೂರಿನ ತಮ್ಮ ಸಹೋದರ ಉಮೇಶ ಪೂಜಾರಿ ಎಂಬವರೊಂದಿಗೆ ವಾಸವಾಗಿದ್ದರು. ಕಳೆದ ವರ್ಷ ಕರೋನಾ ಸಮಯದಲ್ಲಿ ಆತನ ಎಡಕೈಗೆ ಇಂಜೆಕ್ಷನ್ ನೀಡಿದ್ದು ಇದರಿಂದ ಕೈ ನೋವು ಆರಂಭವಾಗಿತ್ತು. ಅಲ್ಲದೆ ಪ್ರದೀಪ್ ಗೆ ಕೈ ನೋವಿನಿಂದ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಇದೇ ವಿಚಾರದಲ್ಲಿ ಪ್ರದೀಪ್ ಮಾನಸಿಕವಾಗಿ ನೊಂದಿದ್ದು ಸೋಮವಾರ ಸಂಜೆ ತಮ್ಮ ಮನೆಯ ಪಕ್ಕದಲ್ಲಿರುವ ಹಾಡಿಯಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಪ್ಪಿನಂಗಡಿ:ದ್ವಿಚಕ್ರ ವಾಹನಗಳೆರಡರ ಮಧ್ಯೆ ಅಪಘಾತ,ಇಬ್ಬರಿಗೆ ಗಾಯ

ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜ..! ಸೂಕ್ತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು,ಸ್ಥಳೀಯರು..!ಚೇತರಿಸಿಕೊಂಡ ವೃದ್ದ ಕೊಟ್ಟ ಉಡುಗೊರೆ ಏನು ಗೊತ್ತಾ?

ನೇಣು ಬಿಗಿದುಕೊಂಡು ಶಿಕ್ಷಕಿ ಆತ್ಮಹತ್ಯೆ