ಕರಾವಳಿ

ಕೊಡಗಿನಲ್ಲಿ ಮುಂದುವರಿದ ನಿಷೇಧಾಜ್ಞೆ: ಪೊಲೀಸರಿಂದ ಪಥಸಂಚಲನ

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ 2ನೇ ದಿನವಾದ ಗುರುವಾರ ನಿಷೇಧಾಜ್ಞೆ ಮುಂದುವರಿದಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.

ಸುಮಾರು 600 ಕ್ಕೂ ಹೆಚ್ಚಿನ ಪೊಲೀಸರನ್ನು ಹೊರಜಿಲ್ಲೆಗಳಿಂದ ಕರೆಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪಡೆಯ 15 ಹಾಗೂ ಜಿಲ್ಲಾ ಸಶಸ್ತ್ರ ಪಡೆ  13 ತುಕಡಿಗಳು ಪಥಸಂಚಲನದಲ್ಲಿ ಭಾಗಿಯಾದವು. ಇಲ್ಲಿನ ಚೌಕಿ, ಕಾಲೇಜು ರಸ್ತೆ, ಮಹದೇವಪೇಟೆ, ಮಾರುಕಟ್ಟೆ, ಜನರಲ್ ತಿಮ್ಮಯ್ಯ ವೃತ್ತಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಮೂಲಕ ಕೊಡಗಿನಲ್ಲಿ ಬಾಲಬಿಚ್ಚಿದ್ರೆ ಹುಷಾರ್ ಅನ್ನುವ ಸಂದೇಶವನ್ನು ಸ್ಪಷ್ಟವಾಗಿ ಪೊಲೀಸರು ರವಾನಿಸಿದಂತಾಗಿದೆ.

Related posts

ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸಿದ ಗುತ್ತಿಗಾರಿನ ವಿದ್ಯಾರ್ಥಿಗಳ ಪ್ರಚಂಡ ಸಾಧನೆ, ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಭರ್ಜರಿ ಜಯ

ಬೆಳ್ತಂಗಡಿ: ಆತನ ಮೂಗನ್ನೇ ಕಚ್ಚಿ ತುಂಡರಿಸಿದ ಸ್ನೇಹಿತ..! ಹೊಸ ವರ್ಷಾಚರಣೆ ಅಮಲಿನಲ್ಲಿ ನಡೆಯಿತು ಅನಾಹುತ

ಉಡುಪಿಯ ಅರಶಿನಗುಂಡಿ ಜಲಪಾತಕ್ಕೆ ಬಿದ್ದ ಯುವಕ ,ಪತ್ತೆಯಾಗದ ಮೃತದೇಹ:ಕುಟುಂಬಸ್ಥರು ಹೇಳಿದ್ದೇನು?