ಕ್ರೈಂವೈರಲ್ ನ್ಯೂಸ್

‘ಕೂಲಿ’ ಗಂಡನನ್ನು ಬಿಟ್ಟು ‘ನಿರುದ್ಯೋಗಿ’ ಪ್ರಿಯಕರನ ಜೊತೆ ಓಡಿ ಹೋದ ಪತ್ನಿ! ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿಯ ಕಣ್ಣೀರ ಕಥೆ..! ಪೊಲೀಸರ ತನಿಖೆಯಲ್ಲಿ ಬಯಲಾದ ರಹಸ್ಯವೇನು?

ನ್ಯೂಸ್ ನಾಟೌಟ್ : ಆಕೆಯ ಪತಿ ಕೂಲಿ ಕೆಲಸ ಮಾಡುತ್ತಿದ್ದ.. ಸಾಲ ಮಾಡಿ ಪತ್ನಿಗೆ ನರ್ಸಿಂಗ್ ಓದಿಸಿದ್ದ, ಆದರೆ ಆಕೆ ಪ್ರಿಯಕರನ ಜೊತೆಗೆ ಓಡಿ ಹೋಗಿ ಮದುವೆಯಾಗಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪತ್ನಿ ಓಡಿ ಹೋಗಿದ್ದಕ್ಕೆ ಇದೀಗ ಪತಿ ಕಣ್ಣೀರಿಟ್ಟುತ್ತಿದ್ದಾರೆ.

ಕೂಲಿ ಮಾಡುತ್ತಿದ್ದ ನಾನು ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಪತ್ನಿ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಎಂದು ಟಿಂಕು ಕುಮಾರ್ ಅಳಲು ತೋಡಿಕೊಂಡಿದ್ದಾನೆ. 2020ರ ನವೆಂಬರ್ ನಲ್ಲಿ ಟಿಂಕು ಕುಮಾರ್ ಪ್ರಿಯಾ ಕುಮಾರಿಯನ್ನು ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು.

ಈ ಘಟನೆ ಬಗ್ಗೆ ಮಾತನಾಡಿರುವ ಪತಿ ಟಿಂಕು ಕುಮಾರ್, ತನ್ನ ಪತ್ನಿ ಸೆ.19ರಂದು ಮನೆಗೆ ಹೋಗುವ ನೆಪದಲ್ಲಿ ಕಾಲೇಜು ಬಿಟ್ಟರೂ ಮನೆಗೆ ಬಂದಿಲ್ಲ. ಈ ಬಗ್ಗೆ ಆತ ಗೊಡ್ಡಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ವಿಚಾರ ತಿಳಿದುಬಂದಿದೆ. ಟಿಂಕು ಕುಮಾರ್ ಪತ್ನಿ ಪ್ರಿಯಾ ಕುಮಾರಿ ಬುಧೋನಾ ಗೊಡ್ಡಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕ ದಿಲ್ಖುಷ್ ರಾವತ್ ಎಂಬಾತನ ಜೊತೆ ಓಡಿ ಹೋಗಿದ್ದಳು. ದೆಹಲಿಗೆ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿರುವ ಫೋಟೊಗಳನ್ನು ಕಳುಹಿಸಿದ್ದಾಳೆ ಎನ್ನಲಾಗಿದೆ.

ಟಿಂಕು ಕೂಲಿ ಕೆಲಸ ಮಾಡುತ್ತಿದ್ದ. ಆತ 2.5 ಲಕ್ಷ ರೂ. ಸಾಲ ಪಡೆದು ಪತ್ನಿಯನ್ನು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿ ಓದಿಸಿದ್ದ. ಗೊಡ್ಡಾದಲ್ಲಿ ಅಂತಿಮ ವರ್ಷದ ನರ್ಸಿಂಗ್ ಓದುತ್ತಿರುವ ಆಕೆಗೆ ಅಂತಿಮ ಹಂತದ ಪರೀಕ್ಷೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಆದರೆ ಇದೀಗ ಪ್ರಿಯಾ ಕುಮಾರಿ ನಿರುದ್ಯೋಗಿ ಯುವಕನ ಜೊತೆಗೆ ಹೋಗಿ ಮತ್ತೊಂದು ಮದುವೆಯಾಗಿದ್ದಾಳೆ. ಹೇಗಾದರೂ ಮಾಡಿ ನನಗೆ ನನ್ನ ಪತ್ನಿಯನ್ನು ಮರಳಿ ಕೊಡಿಸಿ, ನ್ಯಾಯ ದೊರಕಿಸಿಕೊಡಿ ಎಂದು ಪೊಲೀಸರಲ್ಲಿ ಪತಿ ಮನವಿ ಮಾಡಿಕೊಂಡಿದ್ದಾನೆ.

Related posts

ದೊಣ್ಣೆಯಿಂದ ಹೊಡೆದು ಸ್ವಾಮೀಜಿಯ ಬರ್ಬರ ಹತ್ಯೆ..! ಉಳಿದಿಬ್ಬರು ಸ್ವಾಮೀಜಿಗಳನ್ನು ಬಂಧಿಸಿದ ಪೊಲೀಸರು..!

ನಾಗಮಂಗಲ ಹಿಂಸಾಚಾರ ಪ್ರಕರಣದಲ್ಲಿ 52 ಮಂದಿ ಅರೆಸ್ಟ್ ಆಗುತ್ತಿದ್ದಂತೆ ಪ್ರತಿಭಟನೆ..! ”ನಮ್ಮ ಮಕ್ಕಳು ಅಮಾಯಕರು, ಬಿಟ್ಟು ಬಿಡಿ” ಎಂದು ಪೊಲೀಸ್ ಠಾಣೆ ಮುಂದೆ ಸೇರಿದ ಮಹಿಳೆಯರು..!

ಸುಳ್ಯ: ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ನಿಲ್ಲುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಿದ ಪ್ರಕರಣ, ರಕ್ಷಾ ಸಮಿತಿ ಮನವಿಗೆ ವೈದ್ಯಾಧಿಕಾರಿಗಳ ಸ್ಪಂದನೆ