Latestಕ್ರೈಂದೇಶ-ವಿದೇಶ

‘ಕೂಲರ್‌’ ಗಾಗಿ ಕುರ್ಚಿ, ಪಾತ್ರೆಗಳಿಂದ ಹೊಡೆದಾಡಿಕೊಂಡ ವಧು ವರನ ಕಡೆಯವರು..! ಸ್ಥಳಕ್ಕಾಗಮಿಸಿದ ಪೊಲೀಸರು..!

362

ನ್ಯೂಸ್ ನಾಟೌಟ್: ಕೂಲರ್ (cooler) ವಿಚಾರವಾಗಿ ವಧು ವರನ ಕಡೆಯವರ ನಡುವೆ ಜಗಳವು ಶುರುವಾಗಿದೆ. ಕೊನೆಗೆ ಈ ಜಗಳವು ಅತಿರೇಕಕ್ಕೆ ತಿರುಗಿದ್ದು ಎರಡು ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದೆ ಎನ್ನಲಾಗಿದೆ.

@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಕೂಲರ್ ವಿಚಾರಕ್ಕೆ ಜಗಳವು ಶುರುವಾಗಿದ್ದು, ವಧು ವರನ ಕಡೆಯವರು ಪರಸ್ಪರ ಕುರ್ಚಿ, ಪಾತ್ರೆಗಳಿಂದ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಬಹುದು.

ಮದುವೆ ಮಂಟಪದಲ್ಲಿ ವಧು ವರನಿಗಾಗಿ ಕೂಲರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಹೀಗಿರುವಾಗ ವರನ ಕಡೆಯವರು ಈ ಕೂಲರ್ ಮುಂದೆ ಕುಳಿತು ಗಾಳಿ ಬರುವುದನ್ನು ತಡೆದಿರುವುದೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ವಧುವಿನ ಕಡೆಯವರು ಪ್ರಶ್ನೆ ಮಾಡಿದ್ದು, ಬೇರೆ ಕಡೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ಹೊಡೆದಾಟ ಹಂತ ತಲುಪಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ಮದುವೆಗೆ ತೊಂದರೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ ಐ ಆರ್‌..! ಸುಹಾಸ್ ಶೆಟ್ಟಿ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಆರೋಪ..!

ಯುವತಿ ಮೇಲೆ ಸರ್ಕಾರಿ ಬಸ್‌ ಹತ್ತಿಸಲು ಯತ್ನಿಸಿದ ಚಾಲಕ! ವಿಡಿಯೋ ವೈರಲ್ ಆದ ಬಳಿಕ ಚಾಲಕ ಅಮಾನತ್ತು..!

See also  ಪೊಲೀಸರಿಗೆ ಬಡಿಸಿದ ಮೊಸರನ್ನದಲ್ಲಿ ಹುಳು ಪತ್ತೆ..! ಕಳೆದ ಬಾರಿ ಇಲಿಯೊಂದು ಪತ್ತೆಯಾಗಿತ್ತು..! ಕೇಟರರ್ಸ್ ವಿರುದ್ಧ ಪ್ರಕರಣ ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget