ಕರಾವಳಿ

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ:ಎನ್ ಐ ಎಯ ೭ ಸದಸ್ಯರಿಂದ ಶಿಕ್ಷಣ ಸಂಸ್ಥೆಗೆ ದಾಳಿ,ಓರ್ವ ವಿದ್ಯಾರ್ಥಿ ವಶಕ್ಕೆ

400

ನ್ಯೂಸ್ ನಾಟೌಟ್: ಮಂಗಳೂರು ಮಂಗಳೂರಿನ ನಾಗುರಿಯಲ್ಲಿ ಇತ್ತೀಚೆಗೆ ಸಂಬಂಧಿಸಿದ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆ ಚುರುಕುಗೊಂಡಿದೆ.ಮಂಗಳೂರಿನ ಕೊಣಾಜೆ ನಡುಪದವು ಪಿಎ ಇಂಜಿನಿಯರಿಂಗ್ ಕಾಲೇಜಿಗೆ ಎನ್ ಐ ಎ ಅಭಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

Maaz Muneer

ಶಿಕ್ಷಣ ಸಂಸ್ಥೆಗೆ ದಾಳಿ:

ಕುಕ್ಕರ್ ಬಾಂಬ್ ಪ್ರಕರಣದ  ಶಂಕಿತ ಉಗ್ರ ಶಾರೀಶ್ ವಿಚಾರಣೆ ನಡೆಸಿದ ಬೆನ್ನಲ್ಲೇ ಅಧಿಕಾರಿಗಳು ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ಮಾಜ್ ಮುನೀರ್ ಎಂಬಾತ ಅದೇ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದ. ಈ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಬಂದಿಳಿದ ಎನ್ ಐ ಎ ಯ ಏಳು ಸದಸ್ಯರ ತಂಡ ಕಾಲೇಜಿನಲ್ಲಿ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಉಡುಪಿ ಮೂಲದ ರಿಯಾನ್ ಎಂಬ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಏಕಕಾಲದಲ್ಲಿ ತನಿಖೆ:

ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣದ ಎರಡು ತಿಂಗಳ ಮೊದಲೇ ಶಿವಮೊಗ್ಗದಲ್ಲಿ ಬಾಂಬ್ ಟ್ರಯಲ್ ನ ಡೆಸಿರುವುದು ಪತ್ತೆಯಾಗಿತ್ತು. ಪ್ರಕರಣದಲ್ಲಿ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಾಝ್ ಮುನೀರ್ ಮತ್ತು ಯಾಸಿನ್ ಎಂಬುವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಮೊಹಮ್ಮದ್ ಶಾರೀಕ್ ತಲೆಮರೆಸಿಕೊಂಡ ಬಳಿಕ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದ . ಎನ್‌ಐಎ ಅಧಿಕಾರಿಗಳು ಶಿವಮೊಗ್ಗ ಮತ್ತು ಮಂಗಳೂರು ಬ್ಲಾಸ್ ಪ್ರಕರಣದ ಬಗ್ಗೆ ಏಕಕಾಲದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

See also  ಬೆಂಗಳೂರು: ಹೈಕೋರ್ಟ್ ನಲ್ಲಿ ವಹೀದಾ ಆರೀಸ್ ಪೇರಡ್ಕರನ್ನು ಭೇಟಿಯಾಗಿ ಗೌರವಿಸಿದ ಡಾ. ಉಮ್ಮರ್ ಬೀಜದಕಟ್ಟೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget