ಕರಾವಳಿವೈರಲ್ ನ್ಯೂಸ್

ಪುತ್ತೂರು: ಮತಾಂತರವಾಗಿ ಮುಸ್ಲಿಂ ಧರ್ಮಕ್ಕೆ ಬಂದರಷ್ಟೇ ಪ್ರೀತಿಸ್ತಾರಾ..? ಎಂದ ಮಾಳವಿಕಾ ಅವಿನಾಶ್, ಮಸೀದಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶವಿದೆಯಾ ಎಂದು ಕೇಳಿದ್ದೇಕೆ ನಟಿ?

ನ್ಯೂಸ್ ನಾಟೌಟ್ : ನಟಿ ಮಾಳವಿಕಾ ಮೋಹನ್ (Malavika Mohan) ಲವ್ ಜಿಹಾದ್ ವಿಚಾರವಾಗಿ ಹಿಂದೂ ಯುವತಿಯರಿಗೆ ಕಿವಿಮಾತು ಹೇಳಿದ್ದು, ಆಸೆ ಆಮಿಷಗಳಿಗೆ ಒಳಗಾಗಿ ಧರ್ಮ ತೊರೆಯದಂತೆ ಹಿಂದೂ ಯುವತಿಯರಿಗೆ ಮಾಳವಿಕಾ ಕರೆ ನೀಡಿದ್ದಾರೆ.

ಪುತ್ತೂರಿನ ತೆಂಕಿಲದಲ್ಲಿ ನಡೆದ ಪುತ್ತೂರು ಜಿಲ್ಲಾ ಮಹಿಳಾ ಸಮ್ಮೇಳನ ‘ನಾರಿ ಶಕ್ತಿ ಸಂಗಮ’ದಲ್ಲಿ ಮಾಳವಿಕಾ ಮಾತನಾಡಿ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೇಳಿದ್ದಾರೆ.

‘ವಿವಿಧ ಆಸೆ, ಆಮಿಷಗಳಿಗೆ ಒಳಗಾಗಿ ಲವ್ ಜಿಹಾದ್ ಮೂಲಕ ಯುವತಿಯರು ಧರ್ಮ ತೊರೆಯುತ್ತಿದ್ದಾರೆ. ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೊಳಗಾಗುವ ಮೊದಲು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕು. ಹಿಂದೂ ಧರ್ಮದಲ್ಲಿ ಏಕ ಪತ್ನಿ ಸಂಸ್ಕಾರವಿದೆ. ಇಲ್ಲಿ ಪತಿ-ಪತ್ನಿಗೆ ಸಮಾನ ಹಕ್ಕಿದೆ’ ಎಂದು ಮಾಳವಿಕ ತಿಳಿಸಿದ್ದಾರೆ.

‘ಮುಸ್ಲಿಂ ಧರ್ಮದಲ್ಲಿ ಬಹು ಪತ್ನಿತ್ವದ ಪದ್ಧತಿಯಿದೆ. ಅನ್ಯ ಧರ್ಮೀಯರನ್ನು ವಿವಾಹವಾಗುವ ಹಿಂದೂ ಯುವತಿ ತನ್ನ ಹಕ್ಕುಗಳಿಂದ ವಂಚಿತಳಾಗುತ್ತಾಳೆ. ಇದಲ್ಲದೆ ಬಹುಪತ್ನಿತ್ವದಡಿ ಓರ್ವಳಾಗಿ ಬದುಕು ಸಾಗಿಸುವ ಅನಿವಾರ್ಯತೆ ಒದಗಿ ಬರುತ್ತದೆ. ನೀನು ಮತಾಂತರವಾಗಿ ಮುಸ್ಲಿಂ ಧರ್ಮಕ್ಕೆ ಬಂದರಷ್ಟೇ ಪ್ರೀತಿಸುತ್ತೇನೆ ಎನ್ನುವುದಾದರೆ ಅದು ಯಾವ ರೀತಿಯ ಪ್ರೀತಿ? ಪ್ರೇಮ ಅಂದರೆ ಏನು ಎಂಬುದನ್ನು ಪ್ರತಿಯೊಬ್ಬ ಯುವತಿ ಅರ್ಥೈಸಿಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.

‘ಶಬರಿಮಲೆಗೆ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳು ಹಾಗೂ ವಯಸ್ಸಾದ ಮಹಿಳೆಯರು ಮಾತ್ರ ಹೋಗಬಹುದು. ಅದೊಂದು ದೇವಸ್ಥಾನದಲ್ಲಿ ಮಾತ್ರ ಹರೆಯದ ಮಹಿಳೆಯರಿಗೆ ಪ್ರವೇಶವಿಲ್ಲ. ಆದರೆ ಯಾವ ಮಸೀದಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶವಿದೆ? ಮತಾಂತರ ಆದರೆ ಇದನ್ನೆಲ್ಲಾ ಹಿಂದೂ ಮಹಿಳೆಯರು ಕಳೆದುಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ ಮಾಳವಿಕಾ ಹೇಳಿದ್ದಾರೆ.

https://newsnotout.com/2023/12/chennai-rain-and-ed-raid-prakash-raj/

Related posts

ಸೀಮಂತ ಕಾರ್ಯಕ್ರಮಕ್ಕೆ ಚಿನ್ನದ ಆಭರಣ ಬದಲು ‘ಡ್ರೈ ಫ್ರೂಟ್’ ಆಭರಣ..!ಮಹಿಳೆಯ ಸರಳತೆಗೆ ಫಿದಾ ಆದ ನೆಟ್ಟಿಗರು..!ಡ್ರೈ ಫ್ರೂಟ್‌ ಆಭರಣಗಳಲ್ಲಿಯೂ ಎಷ್ಟು ಮುದ್ದಾಗಿ ಕಾಣ್ಸಿಸುತ್ತಿದ್ದಾರೆ ನೋಡಿ..

ಸುಳ್ಯ: ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು, ಆ ಒಂದು ಸುಳಿವು ಹಂತಕನ ಜನ್ಮ ಜಾಲಾಡಿತು..!

ಉಳ್ಳಾಲ ಬೀಚ್ ನಲ್ಲಿ ಮುಳುಗಿ ಮಹಿಳೆ ಸಾವು..! 3 ಮಂದಿಯನ್ನು ರಕ್ಷಿಸಿದ ಸ್ಥಳೀಯರು..!