ಕ್ರೈಂವೈರಲ್ ನ್ಯೂಸ್

2 ಮಕ್ಕಳ ತಾಯಿ ಮುಸ್ಲಿಂ ಸ್ನೇಹಿತನ ಜೊತೆ ಕುವೈತ್‌ ಗೆ ಪರಾರಿ! ದೀಪಿಕಾ ಬುರ್ಖಾ ಹಾಕಿಕೊಂಡಿರುವ ಫೊಟೋ ನೋಡಿ ಪೋಷಕರಿಗೆ ಶಾಕ್! ಮತಾಂತರವಾದ ಸುಳಿವು ನೀಡಿದರೇ ಈಕೆಯ ಪತಿ?

184

ನ್ಯೂಸ್ ನಾಟೌಟ್: ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ, ಕೊನೆಗೆ ತನಗಿರುವ ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು, ಪ್ರಿಯತಮನನ್ನು ಅರಸಿ ಪಾಕಿಸ್ತಾನಕ್ಕೆ ಹೋದ ರಾಜಸ್ಥಾನದ ಭಿವಾಡಿ ಜಿಲ್ಲೆ ಮಹಿಳೆ ಅಂಜು ಪ್ರೇಮ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು.

ಪಾಕಿಸ್ತಾನದ ಪ್ರಿಯತಮ ನಸ್ರುಲ್ಲಾನಿಗಾಗಿ ಪಾಕಿಸ್ತಾನಕ್ಕೆ ತೆರಳಿರುವ ಅಂಜು ಈಗ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆಕೆಯ ಹೆಸರೀಗ ಫಾತಿಮಾ ಆಗಿದೆ. ಹೀಗೆ, ಭಾರತದಿಂದ ಬಂದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಅಂಜುಗೆ ಪಾಕಿಸ್ತಾನದ ಉದ್ಯಮಿಯೊಬ್ಬರು ಭರ್ಜರಿ ಉಡುಗೊರೆ ನೀಡಿದ್ದಾರೆ ಎನ್ನಲಾಗಿತ್ತು.

ಈಗ ಅಂತಹದ್ದೇ ಇನ್ನೊಂದು ಘಟನೆ ವರದಿಯಾಗಿದೆ, ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಮುಸ್ಲಿಂ ಸ್ನೇಹಿತನೊಂದಿಗೆ ಕುವೈತ್‌ಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೀಪಿಕಾ ಪಾಟೀದಾರ್ ಎಂಬಾಕೆ ತನ್ನ ಪ್ರಿಯಕರ ಇರ್ಫಾನ್‌ ಹೈದರ್‌ ಎಂಬವರ ಜತೆ ಓಡಿ ಹೋದವರು.

ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಬುರ್ಖಾ ಹಾಕಿಕೊಂಡಿರುವ ಚಿತ್ರಗಳನ್ನು ನೋಡಿದ ಬಳಿಕ ಅವರು ಕುವೈತ್‌ಗೆ ಹೋಗಿದ್ದಾರೆ ಎನ್ನುವುದು ಮನೆಯವರಿಗೆ ಗೊತ್ತಾಗಿದೆ ಎನ್ನಲಾಗಿದೆ.
ಹೈದರ್‌ ಗುಜರಾತ್‌ ನ ಹಿಮ್ಮತ್‌ ನಗರ ನಿವಾಸಿಯಾಗಿದ್ದು, ಆತನನ್ನು ಭೇಟಿ ಮಾಡಲು ದೀಪಿಕಾ ಆಗ್ಗಾಗ್ಗೆ ಗುಜರಾತ್‌ ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಿಕಾ ಅವರ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಜುಲೈ 15ರಂದು ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು.

ಹೈದರ್‌ ತಮ್ಮ ಪತ್ನಿಯನ್ನು ಪುಸಲಾಯಿಸಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಇಂತಹದ್ದೇ ಕೇಸ್ ನಲ್ಲಿ ಪಾಕ್ ಗೆ ಪರಾರಿಯಾಗಿದ್ದ ಅಂಜು ಇತ್ತೀಚೆಗೆ ನಾನು ಅಲ್ಲಿ ಸುಖವಾಗಿಲ್ಲ, ನಾನು ಮತ್ತೆ ಭಾರತಕ್ಕೆ ಬರಲು ಚಿಂತಿಸಿದ್ದೇನೆ ಎಂದು ಹೇಳಿದ್ದು ಸುದ್ದಿಯಾಗಿತ್ತು, ಇನ್ನು ದೀಪಿಕಾ ಪಾಟೀದಾರ್ ಲವ್ ಸ್ಟೋರಿ ಹೇಗೆ ಕೊನೆಗೊಳ್ಳಲಿದೆ ಎಂದು ಕಾದು ನೋಡಬೇಕಷ್ಟೆ.

See also  ಸ್ಲೀಪರ್ ಕೋಚ್ ಬಸ್​​ನಲ್ಲಿ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು..! ಏನಿದು ವಿಚಿತ್ರ ಪ್ರೇಮ ಕಥೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget