ಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕ್ರೈಸ್ತ ಪ್ರಾರ್ಥನಾ ಕೂಟದ ಮೇಲೆ ದಾಳಿ ನಡೆಸಿದ್ದ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಎಫ್.ಐ.ಆರ್..! ಆ ಮನೆಯಲ್ಲಿ ಮತಾಂತರ ನಡೆಯುತ್ತಿತ್ತಾ..?

241

ನ್ಯೂಸ್ ನಾಟೌಟ್: ಕ್ರೈಸ್ತ ಪ್ರಾರ್ಥನಾ ಸಭೆಯೊಂದು ನಡೆಯುತ್ತಿದ್ದ ಮನೆಯೊಂದಕ್ಕೆ ದಾಳಿ ನಡೆಸಿದ ಸಂಘ ಪರಿವಾರದ ಕಾರ್ಯಕರ್ತರು ಮನೆಯಲ್ಲಿದ್ದ ಕನಿಷ್ಠ ಏಳು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆ ಭಾನುವಾರ(ಜು.17) ಡೆಹ್ರಾಡೂನ್‌ನಲ್ಲಿ ನಡೆದಿದೆ. ಅಲ್ಲಿದ್ದವರ ವಿರುದ್ಧ ಸಂಘ ಪರಿವಾರದ ಸದಸ್ಯರು ಮತಾಂತರದ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಾರ್ಥನಾ ಸಭೆ ದೀಕ್ಷಾ ಪೌಲ್‌ ಎಂಬವರ ಮನೆಯಲ್ಲಿ ನಡೆಯುತ್ತಿತ್ತು.

ದೀಕ್ಷಾ ಅವರ ಪತಿ ರಾಜೀಶ್‌ ಹರಿದ್ವಾರ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದಾರೆ. ಘಟನೆ ಸಂಬಂಧ ನೆಹ್ರೂ ಕಾಲನಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಸಂಘ ಪರಿವಾರದ 11 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ತಮ್ಮ ಮನೆ ಮೇಲೆ ದಾಳಿ ನಡೆಸಿದ ಗುಂಪಿನ ನೇತೃತ್ವವನ್ನು ದೇವೇಂದ್ರ ದೋಭಲ್‌ ಎಂಬವರು ವಹಿಸಿದ್ದರು ಎಂದು ದೀಕ್ಷಾ ಆರೋಪಿಸಿದ್ದಾರೆ. ಈ ವ್ಯಕ್ತಿಯ ಫೇಸ್ಬುಕ್‌ ಪ್ರೊಫೈಲ್‌ ಪ್ರಕಾರ ಈತ ಮಾಜಿ ಸೈನಿಕ ಹಾಗೂ ಆರೆಸ್ಸೆಸ್‌ ಸದಸ್ಯ ಎನ್ನಲಾಗಿದೆ.

Click 👇

https://newsnotout.com/2024/07/politician-nomore-kannada-news-viral-video-west-bengal/
https://newsnotout.com/2024/07/tomato-plant-and-actress-photo-kannada-news-farmer-viral-news/
https://newsnotout.com/2024/07/ksrtc-tour-food-and-other-package-kannada-news-govt-transport/
https://newsnotout.com/2024/07/india-ship-kannada-news-sunk-in-the-sea-oil-leak-13-indian-nomore/
See also  'ದ ಕೇರಳ ಸ್ಟೋರಿ' ಸಿನಿಮಾ ನೋಡಲು ಅರ್ಧ ದಿನ ರಜೆ ಕೊಟ್ಟ ಪ್ರಾಂಶುಪಾಲರು! ಅಧ್ಯಾಪಕರು ತಹಶೀಲ್ದಾರ್‌ಗೆ ಬರೆದ ಪತ್ರದಲ್ಲೇನಿತ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget