ಕರಾವಳಿಸುಳ್ಯ

ಕರಾವಳಿಯ ದೇಗುಲಗಳಲ್ಲಿ ಮುಂದುವರಿದ ವ್ಯಾಪಾರ ಧರ್ಮ ದಂಗಲ್..! ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ವರ್ಷವೂ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ..!

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನದಲ್ಲಿ ವ್ಯಾಪಾರ ಧರ್ಮ ದಂಗಲ್ ಮುಂದುವರಿದಿದೆ. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ಈ ವರ್ಷವೂ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ ಮಾಡಲಾಗಿದೆ.ಈ ಬಗೆಗಿನ ಬ್ಯಾನರ್‌ ಪತ್ತೆಯಾಗಿದೆ.

ಹೌದು, ಡಿ.18 ರಂದು ಚಂಪಾ ಷಷ್ಠಿ ನಡೆಯಲಿದ್ದು,ಚಂಪಾ ಷಷ್ಠಿಯ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ‌ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿದೆ.ಈ ಹಿನ್ನಲೆಯಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಿಂದೂ ಸಂಘಟನೆ ಮುಖಂಡರು ಮನವಿ ಸಲ್ಲಿಸಿದ್ದಾರೆ.ಈ ಮೂಲಕ ಚಂಪಾ ಷಷ್ಠಿ ಸಂದರ್ಭದಲ್ಲಿ ನಡೆಯುವ ಜಾತ್ರೆ ಸಂದರ್ಭ ಅನ್ಯಮತೀಯರಿಗೆ‌ ವ್ಯಾಪಾರಕ್ಕೆ‌ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ.

ಈ ಪ್ರಯುಕ್ತ ಸುಬ್ರಹ್ಮಣ್ಯದ ಕುಮಾರಧಾರ ಬಳಿ ಬ್ಯಾನರ್ ಕೂಡ ಪ್ರತ್ಯಕ್ಷವಾಗಿದೆ.ಹಿಂದೂ ಹಿತರಕ್ಷಣಾ ವೇದಿಕೆ ಸುಬ್ರಹ್ಮಣ್ಯ ಅನ್ನೋ ಹೆಸರಲ್ಲಿ ಬ್ಯಾನರ್ ಕಂಡು ಬಂದಿದ್ದು,ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯಮತೀಯ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಅಂತ ಬ್ಯಾನರ್ ಹಾಕಲಾಗಿದೆ.

Related posts

ಮಡಿಕೇರಿ: ಬಸ್ ನಿಲ್ದಾಣದ ಬಳಿ ಗಾಂಜಾ ಮಾರುತ್ತಿದ್ದ ಒಂಟಿ ಮಹಿಳೆಯ ಬಂಧನ, ಆಕೆ ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ..?

ಖರ್ಗೆ ಗೆಲುವಿನ ಲೆಕ್ಕಾಚಾರದ ಭಾಷಣದ ವೇಳೆ ಸುಳ್ಯಕ್ಕೆ ತಂಪೆರೆದ ಮಳೆ, ಶುಭ ಸೂಚನೆ ಎಂದ್ರು ಖರ್ಗೆ

ಉಪ್ಪಿನಂಗಡಿ: ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ..! ಬೆಳಗಾದರೆ ಎಲ್ಲರಿಗೂ ಗೊತ್ತಾಗುತ್ತೆ ಎಂದು ಕತ್ತು ಹಿಸುಕಿ ಕೊಂದ ಬಾಲಕ..!