ರಾಜಕೀಯವೈರಲ್ ನ್ಯೂಸ್

ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ!

388

ನ್ಯೂಸ್‌ ನಾಟೌಟ್: ರಾಜ್ಯದಲ್ಲಿ ರಾಜಕೀಯ ರಂಗು ಗರಿಗೆದರಿದೆ. ಒಂದೆಡೆ ಚುನಾವಣಾ ಆಕಾಂಕ್ಷಿಗಳ ಲಾಬಿ, ಮತ್ತೊಂದೆಡೆ ತಮ್ಮ ಬೆಂಬಲಿಗರಿಗೆ ಅವಕಾಶ ನೀಡಬೇಕೆಂಬ ಕಾರ್ಯಕರ್ತರ ಒತ್ತಡ ನಡೆಯುತ್ತಿದೆ. ಇದೇ ವಿಚಾರದಲ್ಲಿ ಶುಕ್ರವಾರ ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಹಾಲಿ ಶಾಸಕ ಹರಿಹರ ರಾಮಪ್ಪ ಹಾಗೂ ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್.ಶಂಕರ್ ಪರವಾಗಿ ಕಾರ್ಯಕರ್ತರು ಜಮಾಯಿಸಿದ್ದರು. ಕಾರ್ಯಕರ್ತರ ಜತೆಗೆ ಮಾತನಾಡಿಸಲು ಸಿದ್ದರಾಮಯ್ಯ ಆಗಮಿಸಿದ ಸಂದರ್ಭ ನಡೆದ ತಳ್ಳಾಟದಿಂದ ಗರಂ ಆದ ಸಿದ್ದು ಓರ್ವ ಕಾರ್ಯಕರ್ತನ ಕಪಾಳಕ್ಕೆ ಬಾರಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ನಿವಾಸಕ್ಕೆ ಶಾಸಕ ರಾಮಪ್ಪ ಬೆಂಬಲಿಗರು ಆಗಮಿಸಿದ್ದರು. ರಾಮಪ್ಪ ಅವರಿಗೆ ಟಿಕೆಟ್ ಕೈ ತಪ್ಪುವ ಆತಂಕದಿಂದ ಬೆಂಬಲಿಗರು ಜಮಾಯಿಸಿ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಮತ್ತೊಂದು ಕಡೆ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ನೀಡುವಂತೆ ಆರ್‌. ಶಂಕರ್ ಬೆಂಬಲಿಗರು ಕೂಡ ಆಗಮಿಸಿದ್ದರು. ಈ ವೇಳೆ ಕಾರ್ಯಕರ್ತರ ಜತೆಗೆ ಮಾತನಾಡಲು ಸಿದ್ದರಾಮಯ್ಯ ಆಗಮಿಸಿದ ಸಂದರ್ಭ ಸೇರಿದ್ದವರು ಮುಗಿಬಿದ್ದರು. ಈ ತಳ್ಳಾಟದಿಂದ ಕೋಪಗೊಂಡ ಸಿದ್ದರಾಮಯ್ಯ ವೇಳೆ ಕಾರ್ಯಕರ್ತನೊಬ್ಬನಿಗೆ ಕಪಾಳಮೋಕ್ಷ ಮಾಡಿದರು.

ಆರ್. ಶಂಕ‌ರ್‌ ಬೆಂಬಲಿಗರು ಸಿದ್ದರಾಮಯ್ಯ ಮನೆಗೆ ಬಂದಿರುವುದು ಕುತೂಹಲ ಕೆರಳಿಸಿದೆ. ಶಂಕರ್ ಕಾಂಗ್ರೆಸ್‌ ಸೇರ್ಪಡೆಗೆ ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಸಿದ್ದರಾಮಯ್ಯ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ. ಈ ನಡುವೆ ಅವರ ಬೆಂಬಲಿಗರು ಸಿದ್ದರಾಮಯ್ಯ ಮನೆಯಲ್ಲಿ ಜಮಾಯಿಸಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

See also  ರೇಣುಕಾಸ್ವಾಮಿ ಕಳುಹಿಸಿದ್ದ ಖಾಸಗಿ ಅಂಗದ ಫೋಟೋಗೆ ಸೂಪರ್ ಎಂದು ಕಾಮೆಂಟ್ ಮಾಡಿದ್ದ ಪವಿತ್ರಾ ಗೌಡ..! ವಾದ-ಪ್ರತಿವಾದಗಳ ಮಧ್ಯೆ ಸ್ಪೋಟಕ ಮಾಹಿತಿ ಬಹಿರಂಗ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget