ಕ್ರೈಂಬೆಂಗಳೂರು

ಕಾಂಗ್ರೆಸ್‌ ಕಾರ್ಯಕರ್ತನ ಬರ್ಬರ ಹತ್ಯೆ! ತಲೆಯ ಮೇಲೆ ಸೈಜ್ ಕಲ್ಲು ಎತ್ತಿಹಾಕಿ ಪರಾರಿ!

ನ್ಯೂಸ್‌ ನಾಟೌಟ್‌: ಕಾಂಗ್ರೆಸ್‌ ಕಾರ್ಯಕರ್ತನ ಬರ್ಬರ ಹತ್ಯೆ ಬೆಂಗಳೂರಿನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಲಗ್ಗೆರೆ ಬಳಿಯ ಚೌಡೇಶ್ವರಿ ನಗರದಲ್ಲಿ ಕೊಲೆ ನಡೆದಿದ್ದು, ರವಿ ಅಲಿಯಾಸ್‌ ಮತ್ತಿರವಿ (42)ಯನ್ನು ಕೊಲೆಯಾದ ಕಾಂಗ್ರೆಸ್‌ ಕಾರ್ಯಕರ್ತ ಎಂದು ಗುರುತಿಸಲಾಗಿದೆ.

ಚೌಡೇಶ್ವರಿ ನಗರದ ಹಳ್ಳಿರುಚಿ ಹೋಟೆಲ್‌ ಮುಂಭಾಗದಲ್ಲಿ ಮತ್ತಿರವಿ ಕೊಲೆ ನಡೆದಿದೆ. ಸಿಎಂಎಚ್‌ ಬಾರ್‌ ಬಳಿಯಿಂದ ರವಿಯನ್ನು ಅಟ್ಟಾಡಿಸಿಕೊಂಡು ಬಂದ ಐವರು ಹಳ್ಳಿರುಚಿ ಹೋಟೆಲ್‌ ಮುಂಭಾಗದಲ್ಲಿ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನಂದಿನ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಬೈಕ್‌ನಲ್ಲಿ ಬಂದ ಐವರು ಹಳ್ಳಿರುಚಿ ಹೊಟೇಲ್ ಬಳಿ ಮತ್ತಿರವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅದಲ್ಲದೇ ಆತನ ತಲೆಯ ಮೇಲೆ ಸೈಜ್ ಕಲ್ಲು ಎತ್ತಾಕಿದ್ದಾರೆ. ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ.

Related posts

ಎರಡು ದಿನಗಳ ಹಿಂದೆ ಮದುವೆಯಾಗಿದ್ದ ಯುವಕ ರಸ್ತೆಅಪಘಾತದಲ್ಲಿ ಸಾವು..!

ಅಯೋಧ್ಯೆ​ ದೇವಸ್ಥಾನದ ಅರ್ಚಕ ನಿಗೂಢ ಸಾವು..! ರಾಮ ಜನ್ಮಭೂಮಿಯಲ್ಲಿ ಅರ್ಚಕನಿಗೇನಾಯ್ತು? ಗುರುವಿಗೆ ಶಿಷ್ಯರೇ ಮುಹೂರ್ತ ಇಟ್ಟರಾ?

ಮಗಳ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ತಂದೆ..! ಪತಿಯ ಕೃತ್ಯಕ್ಕೆ ಪತ್ನಿ ಮಾಡಿದ್ದೇನು..?