ರಾಜಕೀಯರಾಜ್ಯವೈರಲ್ ನ್ಯೂಸ್

ಸರ್ಕಾರ ರಚನೆಗೆ ಕಾಂಗ್ರೆಸ್ ನ ತೆರೆ ಮರೆಯ ಕಸರತ್ತು ಫಲ ನೀಡುತ್ತಾ..? ಇಂದು(ಜೂ.5) ಸಂಜೆ ಖರ್ಗೆ ನಿವಾಸದಲ್ಲಿ ಮಹತ್ವದ ರಣತಂತ್ರ ಹೆಣೆಯಲು ತಯಾರಿ..!

213

ನ್ಯೂಸ್ ನಾಟೌಟ್: ಕೇಂದ್ರದಲ್ಲಿ ಹೊಸ ಸರಕಾರ ರಚನೆ ಸಾಧ್ಯತೆ ಕುರಿತು ಚರ್ಚಿಸಲು ಬುಧವಾರ(ಜೂ.೫) ಸಂಜೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂಡಿಯಾ ನಾಯಕರು ಸಭೆ ನಡೆಸಲಿದ್ದು, ಎನ್.ಡಿ.ಎ ಕೂಟದಿಂದ ಹಲವು ಪ್ರಮುಖ ನಾಯಕರಿಗೆ ದೊಡ್ಡ ಮಟ್ಟದ ಆಫರ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮಧ್ಯೆ ನರೇಂದ್ರ ಮೋದಿ ಜೂ.೮ಕ್ಕೆ ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಎನ್.ಡಿ.ಎ ತಿಳಿಸಿದೆ ಎನ್ನಲಾಗಿದೆ. ಖರ್ಗೆ ನಿವಾಸದಲ್ಲಿನ ಸಭೆಯಲ್ಲಿ ಮಾಜಿ ಮಿತ್ರ ಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯುನ ಮುಖ್ಯಸ್ಥರಾದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಸುವ ಕಾರ್ಯತಂತ್ರದ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, “ಇಂಡಿಯಾ ಜನಬಂಧನ್ ನಾಯಕರು ಇಂದು ಸಂಜೆ 6 ಗಂಟೆಗೆ 10, ರಾಜಾಜಿ ಮಾರ್ಗ್ ನಲ್ಲಿ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ಫಲಿತಾಂಶ ಹಾಗೂ ನಂತರದ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಾಗುವುದು” ಎಂದಿದ್ದಾರೆ.

Click 👇

https://newsnotout.com/2024/06/pradeep-eshwar-and-election-challenge
https://newsnotout.com/2024/06/narendra-modi-and-oath-taking-date-fix
https://newsnotout.com/2024/06/meloni-modi-wish-by-meloni-itali-to-narendra-modi
See also  ಜಿಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್..! ಗೋಡೆ ಒಡೆದು 9 ಮಂದಿಯ ರಕ್ಷಣೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget