ಬೆಂಗಳೂರು

ಕಾಣೆಯಾಗಿದ್ದ ಕಾಂಗ್ರೆಸ್‌ ಮುಖಂಡ ಶವವಾಗಿ ಪತ್ತೆ

ನ್ಯೂಸ್ ನಾಟೌಟ್: ಜಾತ್ರೆಯ ಸಮಯದಲ್ಲಿ ಕಾಣೆಯಾಗಿದ್ದ ಕಾಂಗ್ರೆಸ್ ಮುಖಂಡನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ನಲ್ಲೂರು ಜಾತ್ರೆಯ ಸಮಯದಲ್ಲಿ ನಡೆದಿದೆ.

ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪ್ರದೇಶ ಕಾಂಗ್ರೆಸ್‌ ಯುವ ಬ್ರಿಗೇಡ್‌ ಉಪಾಧ್ಯಕ್ಷ ವಿ.ಮಹೇಶ್(45) ಶನಿವಾರ ನಲ್ಲಪ್ಪನಹಳ್ಳಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಲ್ಲೂರು ಜಾತ್ರೆಯ ಸಂದರ್ಭದಲ್ಲಿ ದೇವರ ದರ್ಶನ ಮಾಡಿ ಊಟ ಮುಗಿಸಿಕೊಂಡು, ಕುಟುಂಬಸ್ಥರಿಗೆ ಊಟ ತರುತ್ತೇನೆ ಎಂದು ಹೊರಟ ಮಹೇಶ್‌ ಕಾಣೆಯಾಗಿದ್ದರು. ಸ್ನೇಹಿತರು, ಕುಟುಂಬಸ್ಥರು ಅವರಿಗಾಗಿ ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ. ಜಿಗುಪ್ಸೆಗೆ ಒಳಗಾಗಿದ್ದ ಅವರು, ಕೆರೆಗೆ ಹಾರಿ ಸಾವನ್ನಪ್ಪಿರಬಹುದು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಚನ್ನರಾಯಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪ್ರಜ್ವಲ್‌ ರೇವಣ್ಣನಿಗೆ ಜೈಲೇ ಗತಿ..! ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

ಮೆಟ್ರೋ ಸ್ಟೇಷನ್‌ನಲ್ಲಿ ಜೋಡಿಯ ರೊಮ್ಯಾನ್ಸ್ ..! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಉಪ ಚುನಾವಣೆಗೆ ಬಿಗ್ ಬಾಸ್ ಸ್ಪರ್ಧಿ ಲಾಯರ್‌ ಜಗದೀಶ್ ಸ್ಪರ್ಧೆ..? ಕಾಂಗ್ರೆಸ್‌ ಟಿಕೆಟ್‌ ಕೊಟ್ಟರೆ ಬೊಮ್ಮಾಯಿ ಪುತ್ರನ ವಿರುದ್ಧ ನಿಲ್ಲುತ್ತೇನೆಂದ ಲಾಯರ್..!