ಕರಾವಳಿ

ಕಾಂಗ್ರೆಸ್ ಮುಖಂಡನ ಮಗಳು ನಾಪತ್ತೆ..ಊರಿಡೀ ಹುಡುಕಾಡಿದರೂ ಸುಳಿವಿಲ್ಲ..!

509

ನ್ಯೂಸ್ ನಾಟೌಟ್ : ಕಾಂಗ್ರೆಸ್ ಮುಖಂಡನ ಮಗಳೊಬ್ಬಳು ನಾಪತ್ತೆಯಾಗಿದ್ದಾಳೆ. ಕಾಣೆಯಾಗಿ 40 ಗಂಟೆಗಳು ಕಳೆದರೂ ಪೊಲೀಸರಿಗೆ ಇನ್ನೂ ಸುಳಿವು ಸಿಕ್ಕಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಸ್ಥಾನದ ಜೈಪುರದಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಮುಖಂಡನ ಮಗಳು ಅಭಿಲಾಷಾ ಕೇಶವತ್ (21) ಅಂಗಡಿಗೆ ತರಕಾರಿ ತರಲು ಸ್ಕೂಟಿಯಲ್ಲಿ ತೆರಳಿದ್ದಳು. ಹಾಗೆ ಹೋದವಳು ಎಷ್ಟು ಹೊತ್ತು ಕಳೆದರೂ ಮನೆಗೆ ಹಿಂದಿರುಗಲಿಲ್ಲ. ಈ ವೇಳೆ ಗಾಬರಿಗೊಂಡ ಮನೆ ಮಂದಿ ಹುಡುಕಾಟ ನಡೆಸಿದ್ದಾರೆ. ಎಷ್ಟು ಹುಡುಕಾಡಿದರೂ ಆಕೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣದ ರಸ್ತೆಯ ಪೊದೆಯಲ್ಲಿ ಅಭಿಲಾಷಾ ಅವಳ ಸ್ಕೂಟಿ ಪತ್ತೆಯಾಗಿದೆ. ಪೊಲೀಸರು ಸುತ್ತಮುತ್ತ ಅಳವಡಿಸಿರುವ 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಲ್ಲೂ ನೋಡಿದರು ಅಭಿಲಾಷಾ ಪತ್ತೆಯಾಗಲಿಲ್ಲ.

See also  ಸುಳ್ಯ: 52 ನೇ ವರ್ಷದ 'ಶ್ರೀ ಶಾರದಾಂಬ ಉತ್ಸವ-2023' ಕ್ಕೆ ಭರ್ಜರಿ ಸಿದ್ಧತೆ,ಶಾಸಕಿ ಕು.ಭಾಗೀರಥಿ ಮುರುಳ್ಯ ರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget