ಕರಾವಳಿಪುತ್ತೂರುರಾಜಕೀಯ

ನೂತನ ಕುಮಾರಿ ಅವರ ಕೆಲಸವನ್ನು ಕಾಂಗ್ರೆಸ್ ವಜಾ ಮಾಡಿಲ್ಲ,ಹಿಂದಿನ ಸರಕಾರದ ಆದೇಶದಂತೆ ಕೆಲಸಕ್ಕೆ ಕತ್ತರಿ ಬಿದ್ದಿದೆ-ಎಂ.ವೆಂಕಪ್ಪ ಗೌಡ

290

ನ್ಯೂಸ್ ನಾಟೌಟ್ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರುರವರ ಪತ್ನಿಯ ಕೆಲಸವನ್ನು ಕಾಂಗ್ರೆಸ್ ಕಿತ್ತುಕೊಂಡಿದೆ ಅನ್ನುವ ನೋವಿನ ವಿಚಾರ ಹೊರ ಬಿದ್ದ ಬೆನ್ನಲ್ಲೇ ರಾಜ್ಯದಾದ್ಯಂತ ಇದು ಭಾರಿ ಚರ್ಚೆಗೂ ಕಾರಣವಾಗಿದೆ.ಈ ಬಗ್ಗೆ ಸುಳ್ಯ ಪ್ರೆಬ್ ಕ್ಲಬ್ ನಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಅವರು, ನೂತನ ಕುಮಾರಿ ಕೆಲಸಕ್ಕೆ ಕಾಂಗ್ರೆಸ್ ಕತ್ತರಿ ಹಾಕಿಲ್ಲ ಎಂದಿದ್ದಾರೆ.

ಈ ಹಿಂದಿನ ಮುಖ್ಯಮಂತ್ರಿಗಳ ಆದೇಶದಂತೆ ತಾತ್ಕಾಲಿಕ ನೆಲೆಯಲ್ಲಿ ನೇಮಿಸಿ ಆದೇಶ ಹೊರಡಿಸಿದ್ದರು.ಅವರ ಆದೇಶದಂತೆ ಇಂದು ಅವರ ಗುತ್ತಿಗೆ ಆಧಾರದಲ್ಲಿ ಮುಂದಿನ ಸರಕಾರ ಅಥವಾ ಬೇರೆ ಮುಖ್ಯಮಂತ್ರಿ ಬರುವ ತನಕ ಎಂದು ಉಲ್ಲೇಖಿಸಲಾಗಿದೆ.ಈ ಹಿಂದೆಯೇ ಅವರೇ ತಿಳಿಸಿರುವ ಕಾರಣ ಇದೀಗ ಅವರು ಕೆಲಸ ಕಳೆದುಕೊಂಡಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

ಅವರಿಗೆ ಮಾನವೀಯ ನೆಲೆಯಲ್ಲಿ ಸಿಕ್ಕಿರುವ ಕೆಲಸವನ್ನು ಮುಂದೆ ನಮ್ಮ ಕಾಂಗ್ರೆಸ್ ನೇತೃತ್ವದ ಸರಕಾರದ ಅಡಿಯಲ್ಲಿ ಕೆಲಸ ಮಾಡಲು ಬಯಸಿ ಅರ್ಜಿ ಸಲ್ಲಿಸಿದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದರು. 

See also  ಹಾನಗಲ್ ಉಪಚುನಾವಣೆ: ಉಸ್ತುವಾರಿಯಾಗಿ ಎಚ್.ಎಂ.ನಂದಕುಮಾರ್ ನೇಮಕ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget