ಕರಾವಳಿರಾಜಕೀಯ

ಮಹಿಳೆಯರಿಗೆ ಉಚಿತ ಬಸ್ ಪಾಸ್ ಬಗ್ಗೆ ನಾಳೆಯೇ ಅಂತಿಮ ನಿರ್ಧಾರ? ಸಾರಿಗೆ ಇಲಾಖೆಯ ಸಭೆ ಕರೆದ ಸಚಿವರು..!

ನ್ಯೂಸ್ ನಾಟೌಟ್ : ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಕಾರ, ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಿಸುವ ವಿಚಾರವಾಗಿ ನಾಳೆ (ಮೇ30) ಬೆಂಗಳೂರಿನ ಶಾಂತಿನಗರದ ಕೆಎಸ್ಆರ್‌ಟಿಸಿ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎನ್ನಲಾಗಿದೆ.

ನಿಗಮಗಳ ಆದಾಯದಲ್ಲಿ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ. ಸರಕಾರದ ಯೋಜನೆ ಆದ್ದರಿಂದ ನಿಗಮಗಳಿಂದ ಹಣ ಭರಿಸಲು ಆಗಲ್ಲ. ಈ ವಿಚಾರಗಳನ್ನು ಈಗಾಗಲೇ ಸಿಎಂ ಅವರ ಗಮನಕ್ಕೆ ಅಧಿಕಾರಿಗಳು ತಂದಿದ್ದಾರೆ.

ಇನ್ನು ಉಚಿತ ಬಸ್ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣದ ಮಿತಿಯನ್ನು ವಿಧಿಸಲು ಸರಕಾರ ಚಿಂತನೆ ನಡೆಸಿ, ನಾಲ್ಕು ಸಾರಿಗೆ ನಿಗಮಗಳ ಹಣಕಾಸಿನ ಸ್ಥಿತಿಯ ಬಗ್ಗೆ ಅವಲೋಕಿಸಿರುವ ಸಚಿವರು ಬಸ್ ಪಾಸ್ ಸಬ್ಸಿಡಿಯ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.

Related posts

ಮಂಗಳೂರು: ರೈಲಿನಡಿಗೆ ಬೀಳುತ್ತಿದ್ದ ವಿದ್ಯಾರ್ಥಿನಿಯ ಪ್ರಾಣ ಕಾಪಾಡಿದ ವಿದ್ಯಾರ್ಥಿ

ಪೊಲೀಸ್‌ ಠಾಣೆಯಲ್ಲಿಯೇ ಅನ್ಯಧರ್ಮದ ಜೋಡಿಯ ಮದುವೆ ಮಾಡಿಸಿದ್ರಾ ಬಜರಂಗದಳದವರು..? ಯುವತಿ ತನ್ನ ಮನೆಯವರ ವಿರುದ್ಧವೇ ಬೆದರಿಕೆ ಕೇಸ್ ದಾಖಲಿಸಿದ್ದೇಕೆ?

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್‌. ರವಿ ಕುಮಾರ್,ಸಿಇಒ ಡಾ. ಕುಮಾರ್ ದಿಢೀರ್ ವರ್ಗಾವಣೆ