ಕ್ರೈಂವೈರಲ್ ನ್ಯೂಸ್

ನೆರೆಮನೆಯಾತ ಸೀರೆ ಎಳೆದದ್ದಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಳಾ? ಕೊಳಚೆ ನೀರು ಹರಿಸುವ ವಿಚಾರಕ್ಕೆ ನಡೆದ ಜಗಳದಲ್ಲಿ ಅಂತದ್ದೇನಾಯ್ತು?

ನ್ಯೂಸ್ ನಾಟೌಟ್: ಮನೆಯ ಮುಂದೆ ಕೊಳಚೆ ನೀರು ಹರಿಸುವ ವಿಚಾರಕ್ಕೆ ಅಕ್ಕ ಪಕ್ಕದ ಮನೆಯವರ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಎಳೆದಾಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಯಾದಗಿರಿಯ ಸುರಪುರದ ಕುಚಕನೂರಿನಲ್ಲಿ ನಡೆದಿದೆ.

ಮಹಿಳೆಯ ಪಕ್ಕದ ಮನೆಯವರ ನಡುವೆ ಆಗಾಗ ಕಸ ಹಾಗೂ ಕೊಳಚೆ ನೀರಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಮನೆ ಮುಂದೆ ನೀರು ಬಿಟ್ಟ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಜಗಳ ನಡೆದಿತ್ತು.

ಈ ವೇಳೆ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಹಿಡಿದು ಎಳೆದಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಮಹಿಳೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ವಿಜಯಲಕ್ಷ್ಮಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದ್ದು, ಮಹಿಳೆ ಆತ್ಮಹತ್ಯೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಆಕೆಯ ಶವವನ್ನು ಹುಣಸಗಿ ಪೊಲೀಸ್ (Police) ಠಾಣೆಯ ಮುಂದಿಟ್ಟು ಪ್ರತಿಭಟಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ವಿಟ್ಲ: ಎಸ್ ಎಸ್ ಎಲ್‌ ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಚೀನಾ ಗಡಿ ಭಾಗದಲ್ಲಿ 5 ಭಾರತೀಯ ಯೋಧರು ಹುತಾತ್ಮ..! ಯುದ್ಧ ಟ್ಯಾಂಕರ್ ಮೂಲಕ ನದಿ ದಾಟುವಾಗ ಅವಘಡ..!

ಏರ್‌ಟೆಲ್ ಗ್ರಾಹಕರಿಗೆ ಈಗ ಅನಿಯಮಿತ 5G ಉಚಿತ! ಹೇಗೆ ಪಡೆದುಕೊಳ್ಳುವುದು? ಇಲ್ಲಿದೆ ಮಾಹಿತಿ