ಉಡುಪಿಕರಾವಳಿಕಾಸರಗೋಡುಕ್ರೈಂಮಂಗಳೂರುವಿಡಿಯೋವೈರಲ್ ನ್ಯೂಸ್

ಖಾಸಗಿ ಬಸ್ ಕಂಡಕ್ಟರ್ ನ ಸಮಯಪ್ರಜ್ಞೆಯಿಂದ ಬದುಕುಳಿದ ಪ್ರಯಾಣಿಕ..! ಬಿದ್ದವನನ್ನು ಒಂದೇ ಕೈಯಲ್ಲಿ ಹಿಡಿದು ರಕ್ಷಿಸಿ ಹೀರೋ ಆದ ಕಂಡಕ್ಟರ್..! ಇಲ್ಲಿದೆ ವೈರಲ್ ವೀಡಿಯೋ

210

ನ್ಯೂಸ್ ನಾಟೌಟ್ : ಕೇರಳ ಹಾಗೂ ದಕ್ಷಿಣ ಕನ್ನಡ, ಉಡುಪಿಯಲ್ಲಿ ಸರ್ಕಾರಿ ಬಸ್ ಗಳಿಗಿಂತ ಖಾಸಗಿ ಬಸ್ ಗಳೇ ಹೆಚ್ಚು ಜನರಿಗೆ ಹತ್ತಿರವಾಗಿವೆ. ಕೇರಳದ ಖಾಸಗಿ ಬಸ್ ಕಂಡಕ್ಟರ್‌ನೋರ್ವನ ಸಮಯ ಪ್ರಜ್ಞೆಯಿಂದ ಪ್ರಯಾಣಿಕನೊಬ್ಬನ ಪ್ರಾಣ ಉಳಿಸಿದ ಘಟನೆ ಇಂದು(ಜೂ.7) ನಡೆದಿದೆ.

ಬಸ್‌ ಹಿಂಬಾಗಿಲಿನ ಸಮೀಪದ ಸೀಟಿಗೆ ಒತ್ತಿ ನಿಂತುಕೊಂಡು ಬಸ್ ಕಂಡಕ್ಟರ್ ಟಿಕೆಟ್ ನೀಡುತ್ತಿರುವ ವೇಳೆ ಬಸ್‌ ತಕ್ಷಣ ಬ್ರೇಕ್ ಹಾಕಿದೆ. ಈ ವೇಳೆ ಬಾಗಿಲ ಬಳಿ ನಿಂತಿದ್ದ ಯುವಕನೋರ್ವ ಮುಗ್ಗರಿಸಿ ಇನ್ನೇನು ತೆರೆದಿದ್ದ ಬಾಗಿಲಿನಲ್ಲಿ ಕೆಳಗೆ ಬೀಳಬೇಕು ಅನ್ನುವಷ್ಟರಲ್ಲಿ ಕಂಡಕ್ಟರ್ ತನ್ನ ಒಂದೇ ಕೈನಿಂದ ಆತನನ್ನು ಹಿಡಿದು ಆತನ ಪ್ರಾಣ ರಕ್ಷಿಸಿದ್ದಾನೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದು ವೇಳೆ ಕಂಡಕ್ಟರ್ ಆತನ ಕೈ ಹಿಡಿಯದೇ ಹೋಗಿದ್ದರೆ ಆತ ತೆರೆದ ಬಾಗಿಲಿನ ಮೂಲಕ ಬಸ್ಸಿನಿಂದ ಕೆಳಗೆ ಬಿದ್ದು ಅನಾಹುತ ಸಂಭವಿಸುತ್ತಿತ್ತು. ಕೂಡಲೇ ಬಸ್ ನಿಂತಿದ್ದು, ನಂತರ ಬಸ್ ಪ್ರಯಾಣಿಕ ಖಾಲಿ ಇದ್ದ ಒಂದು ಸೀಟ್‌ನಲ್ಲಿ ಕುಳಿತಿದ್ದಾನೆ. ಬಳಿಕ ಬಸ್ ಮತ್ತೆ ಹೊರಟಿದೆ. ಕಂಡಕ್ಟರ್‌ನ ಸಮಯಪ್ರಜ್ಞೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Click 👇

https://newsnotout.com/2024/06/fake-adhar-identification-for-entry-to-parliament
https://newsnotout.com/2024/06/cinema-and-banned-in-karnataka-and-other-states-for-issue
https://newsnotout.com/2024/06/bescom-employees-and-car-issue-police
https://newsnotout.com/2024/06/father-preparation-for-son-marriage-and-nomore
See also  ಫ್ರಾನ್ಸ್ ನಿಂದ 63,000 ಕೋಟಿ ರೂಪಾಯಿಯ 26 ರಫೇಲ್ ಯುದ್ಧ ವಿಮಾನ ಖರೀದಿ..! ಭಾರತದ ಸಾಗರ ಗಡಿಗಳನ್ನು ಕಾಯಲು ಗಡಿದಾಟಿ ಬಂದ ವೀರರು..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget